ಸಾಮಾಗ್ರಿಗಳು
ಬಾಳೆಕಾಯಿ
ಉಪ್ಪು
ಖಾರದಪುಡಿ
ಅರಿಶಿಣ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಸಾಂಬಾರ್ ಪುಡಿ
ಗರಂ ಮಸಾಲಾ
ಕರಿಬೇವು
ಮಾಡುವ ವಿಧಾನ
ಮೊದಲು ಬಾಳೆಕಾಯಿ ಕತ್ತರಿಸಿ ಅರಿಶಿಣ ನೀರಿನಲ್ಲಿ ಹಾಕಿ ಇಡಿ
ನಂತರ ಪಾತ್ರೆಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಖಾರದಪುಡಿ, ಗರಂ ಮಸಾಲಾ, ಸಾಂಬಾರ್ ಪುಡಿ ಹಾಕಿ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ
ನಂತರ ಇದಕ್ಕೆ ಬಾಳೆಕಾಯಿ ಅದ್ದಿ ಮ್ಯಾರಿನೇಟ್ ಮಾಡಿ
ಒಂದು ಗಂಟೆ ನಂತರ ತವಾಗೆ ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿದರೆ ತವಾ ಫ್ರೈ ರೆಡಿ