RECIPE| ಫಟಾಫಟ್ ಗರಿಗರಿಯಾದ ಅವಲಕ್ಕಿ ದೋಸೆ ಹೀಗೆ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೆಳಗಿನ ಬ್ರೇಕ್ ಫಾಸ್ಟ್ಗೆ ದೊಸೆ ಮಾಡಲು ಹೆಚ್ಚು ಶ್ರಮಪಡಬೇಕಿಲ್ಲ. ಹೌದು ಸುಲಭವಾಗಿ ಕೇವಲ 10 ನಿಮಿಷದಲ್ಲಿ ದಿಢೀರನೇ ದೋಸೆ ಮಾಡುವ ವಿಧಾನವನ್ನು ನಾವು ಹೇಳಿಕೊಡುತ್ತೇವೆ.

ಬೇಕಾಗುವ ಸಾಮಾಗ್ರಿ:

ನೆನೆಸಿದ ಅವಲಕ್ಕಿ – 3 ರಿಂದ 4 ಕಪ್, ಚಿರೋಟಿ ರವೆ- 1 ಕಪ್, ಮೊಸರು 1/2 ಕಪ್, ರುಚಿಗೆ ತಕ್ಕಷ್ಟು ಉಪ್ಪು, ಅಡುಗೆ ಸೋಡಾ ಅಗತ್ಯಕ್ಕೆ ತಕ್ಕಷ್ಟು..

ಮಾಡುವ ವಿಧಾನ:

ಮೊದಲಿಗೆ 3ರಿಂದ 4 ಕಪ್ ಅವಲಕ್ಕಿಯನ್ನು ತೆಗೆದುಕೊಂಡು ನೀರಿನಲ್ಲಿ ಚೆನ್ನಾಗಿ ನೆನೆಸಿಡಿ. ಬಳಿಕ ನೆನಸಿದ ಅವಲಕ್ಕಿಯನ್ನು ಚೆನ್ನಾಗಿ ಹಿಂಡಿ ಒಂದು ಬೌಲ್ಗೆ ತೆಗೆದಿಟ್ಟುಕೊಳ್ಳಿ. ಹಿಂಡಿದ ಅವಲಕ್ಕಿಗೆ 1 ಕಪ್  ಚಿರೋಟಿ ರವೆ ಹಾಗೂ ಗಟ್ಟಿ ಮೊಸರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ರುಚಿಗೆ ತಕ್ಕಷ್ಟು ಉಪ್ಪು, ಅಡುಗೆ ಸೋಡಾ ಹಾಕಿ ಮತ್ತೆ ಮಿಶ್ರಣ ಮಾಡಿ. ಹೀಗೆ ರೆಡಿಯಾದ ಮಿಶ್ರಣವನ್ನು 15 ನಿಮಿಷಗಳ ಕಾಲ ಹಾಗೇ ಇಡಿ. 15 ನಿಮಿಷಗಳ ಬಳಿಕ ಕಾದ ಕಾವಲಿ ಮೇಲೆ ದೋಸೆ ಹಾಕಿ.  ಕೊಬ್ಬರಿ ಚಟ್ನಿ ಚಟ್ನಿಯೊಂದಿಗೆ ಬ್ಯಾಟಿಂಗ್ ಮಾಡಿ…

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!