October 27, 2026
Tuesday, October 27, 2026
spot_img

ಇಂದು ಸಂಜೆ ಸ್ನಾಕ್ಸ್‌ಗೆ ಗರಿಗರಿಯಾದ ಮದ್ದೂರು ವಡೆ ಮಾಡಿ, ಸಿಂಪಲ್‌ ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು

ಅಕ್ಕಿ ಹಿಟ್ಟು
ಮೈದಾ ಹಿಟ್ಟು
ರವೆ
ಈರುಳ್ಳಿ
ಹಸಿಮೆಣಸಿನಕಾಯಿ
ಕರಿಬೇವು
ಕೊತ್ತಂಬರಿ ಸೊಪ್ಪು
ಶುಂಠಿ
ಜೀರಿಗೆ
ಉಪ್ಪು
ಬಿಸಿ ಎಣ್ಣೆ

ಮಾಡುವ ವಿಧಾನ

ಒಂದು ಪಾತ್ರೆಯಲ್ಲಿ ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ, ಕರಿಬೇವು, ಕೊತ್ತಂಬರಿ, ಜೀರಿಗೆ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ಅಕ್ಕಿ ಹಿಟ್ಟು, ಮೈದಾ ಮತ್ತು ರವೆಯನ್ನು ಸೇರಿಸಿ. ಬಿಸಿ ಎಣ್ಣೆ ಹಾಕಿ ಮಿಶ್ರಣ ಮಾಡಿ. ಈರುಳ್ಳಿಯ ತೇವಾಂಶದಲ್ಲೇ ಹಿಟ್ಟು ಹಿಡಿಯುವಂತೆ ಕಲಸಿ. ಅಗತ್ಯವಿದ್ದರೆ ಮಾತ್ರ ಸ್ವಲ್ಪ ನೀರು ಸೇರಿಸಿ. ಹಿಟ್ಟು ಮೆತ್ತಗಾದರೆ ವಡೆ ಚೆನ್ನಾಗಿ ಬರೋದಿಲ್ಲ ಹಾಗೂ ಜಾಸ್ತಿ ಎಣ್ಣೆ ಹೀರಿಕೊಳ್ಳುತ್ತದೆ.

ಹಿಟ್ಟನ್ನು ಸಣ್ಣ ಉಂಡೆಗಳಾಗಿ ಮಾಡಿ. ಎಣ್ಣೆ ಸವರಿದ ಹಾಳೆ ಅಥವಾ ಕೈ ಮೇಲೆ ಇಟ್ಟು ತೆಳುವಾಗಿ ತಟ್ಟಿ. ಅಂಚುಗಳು ತುಂಬಾ ದಪ್ಪವಾಗದಂತೆ ನೋಡಿಕೊಳ್ಳಿ.

ಮಧ್ಯಮ ಉರಿಯಲ್ಲಿ ಎಣ್ಣೆ ಬಿಸಿಮಾಡಿ. ವಡೆಗಳನ್ನು ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ಕರಿಯಿರಿ. ನಂತರ ಬಿಸಿ ಬಿಸಿ ವಡೆ ಸೇವಿಸಿ

Must Read