ಸಾಮಾಗ್ರಿಗಳು
ಮೆಂತ್ಯೆ ಸೊಪ್ಪು
ಅಣಬೆ
ಹಸಿಮೆಣಸು
ಶುಂಠಿ
ಬೆಳ್ಳುಳ್ಳಿ
ಚಕ್ಕೆ
ಲವಂಗ
ಕಾಯಿ
ಈರುಳ್ಳಿ
ಟೊಮ್ಯಾಟೊ
ಅಕ್ಕಿ
ಮಾಡುವ ವಿಧಾನ
ಮೊದಲು ಮಿಕ್ಸಿಗೆ ಚಕ್ಕೆ ಲವಂಗ ಹಸಿಮೆಣಸು ಶುಂಠಿ ಬೆಳ್ಳುಳ್ಳಿ ಕಾಯಿ ಹಾಕಿ ರುಬ್ಬಿ ಇಡಿ
ನಂತರ ಕುಕ್ಕರ್ಗೆ ಎಣ್ಣೆ ಈರುಳ್ಳಿ ಹಾಕಿ ಬಾಡಿಸಿ
ನಂತರ ಟೊಮ್ಯಾಟೊ ಹಾಕಿ
ನಂತರ ಮೆಂತ್ಯೆ ಸೊಪ್ಪು ಹಾಗೂ ಮಶ್ರೂಮ್ ಹಾಕಿ ಬಾಡಿಸಿ
ನಂತರ ಮಿಕ್ಸಿಯ ಮಸಾಲಾ ಹಾಕಿ, ಉಪ್ಪು ಹಾಕಿ
ನಂತರ ಅಕ್ಕಿ ಹಾಕಿ
ನಂತರ ನೀರು ಹಾಕಿ ಎರಡು ವಿಶಲ್ ಹಾಕಿಸಿದರೆ ಬಾತ್ ರೆಡಿ