October 3, 2026
Saturday, October 3, 2026
spot_img

ಸಂಜೆಯ ಸ್ನಾಕ್ಸ್‌ಗೆ ಹೆಲ್ತಿಯಾದ ರೈಸ್‌ ಪೇಪರ್‌ ಪನೀರ್‌ ಚಿಪ್ಸ್‌ ಮಾಡಿ, ತುಂಬಾನೇ ಸುಲಭ

ಸಾಮಾಗ್ರಿಗಳು
ಪನೀರ್‌
ಉಪ್ಪು
ಖಾರದಪುಡಿ
ಆರಿಗ್ಯಾನೊ
ರೈಸ್‌ ಪೇಪರ್‌
ಎಣ್ಣೆ
ಚಿಲ್ಲಿ ಆಯಿಲ್‌
ಜೇನುತುಪ್ಪ

ಮಾಡುವ ವಿಧಾನ
ಮೊದಲು ಪನೀರ್‌ನ್ನು ತೆಳು ಹಾಳೆಯಂತೆ ಕತ್ತರಿಸಿಕೊಳ್ಳಿ. ನಂತರ ಒಂದು ತಟ್ಟೆಗೆ ರೈಸ್‌ ಪೇಪರ್‌ ಇಡಿ, ಅದಕ್ಕೆ ನೀರನ್ನು ಸ್ಪ್ರೇ ಮಾಡಿ
ಅದರ ಮೇಲೆ ಪನೀರ್‌ ಪೀಸ್‌ಗಳನ್ನು ಇಡಿ, ಉಪ್ಪು, ಆರಿಗ್ಯಾನೋ ಹಾಗೂ ಚಿಲ್ಲಿ ಪುಡಿ ಉದುರಿಸಿ
ಅದರ ಮೇಲೆ ಇನ್ನೊಂದು ರೈಸ್‌ ಪೇಪರ್‌ ಇಟ್ಟು ಸೀಲ್‌ ಮಾಡಿ
ನಂತರ ಇದನ್ನು ಏರ್‌ಫ್ರೈಯರ್‌ಗೆ ಹಾಕಿ, ಅದು ಇಲ್ಲವೆಂದರೆ ಸ್ವಲ್ಪ ಎಣ್ಣೆ ಹಾಕಿ ತವಾ ಮೇಲೆ ಹಾಕಿ
ಎಣ್ಣೆಯನ್ನು ಸ್ಪ್ರೇ ಮಾಡಿ. ಏರ್‌ಫ್ರೈ ಆದ ನಂತರ ಅದನ್ನು ಪೀಸ್‌ ಪೀಸ್‌ ಮಾಡಿ. ನಂತರ ಒಂದು ಬೌಲ್‌ಗೆ ಹಾಕಿ
ಮೇಲೆ ಉಪ್ಪು, ಚಿಲ್ಲಿ ಆಯಿಲ್‌ ಹಾಗೂ ಹನಿ ಹಾಕಿ. ಮುಚ್ಚುಳ ಮುಚ್ಚಿ ಒಂದು ರೌಂಡ್‌ ತಿರುಗಿಸಿದರೆ ಚಿಪ್ಸ್‌ ರೆಡಿ

Must Read