ದಾಲ್ ಫ್ರೈ
ಕುಕ್ಕರ್‌ಗೆ ಬೇಳೆ, ಉಪ್ಪು, ಅರಿಶಿಣ, ಟೊಮ್ಯಾಟೊ, ಈರುಳ್ಳಿ ಹಾಕಿ ಮೂರು ವಿಶಲ್ ಕೂಗಿಸಿ
ನಂತರ ಪಾತ್ರೆಗೆ ಎಣ್ಣೆ ಸಾಸಿವೆ ಜೀರಿಗೆ ಹಿಂಗ್ ಬೆಳ್ಳುಳ್ಳಿ ಹಸಿಮೆಣಸು ಹಾಕಿ, ನಂತರ ಈರುಳ್ಳಿ ಟೊಮ್ಯಾಟೊ ಹಾಕಿ ಬಾಡಿಸಿ, ಉಪ್ಪು, ಖಾರದಪುಡಿ, ಸಾಂಬಾರ್ ಪುಡಿ ಹಾಕಿ ಮಿಕ್ಸ್ ಮಾಡಿ
ನಂತರ ಇದಕ್ಕೆ ಬೇಯಿಸಿದ ಬೇಳೆ ಹಾಕಿದ್ರೆ ದಾಲ್ ಫ್ರೈ ರೆಡಿ
ಜೀರಾ ರೈಸ್
ಕುಕ್ಕರ್‌ಗೆ ಎಣ್ಣೆ, ತುಪ್ಪ, ಜೀರಿಗೆ ಸಾಸಿವೆ ಹಾಕಿ, ನಂತರ ಚಕ್ಕೆ, ಲವಂಗ ಹಾಕಿ, ಪಲಾವ್ ಎಲೆ ಹಾಕಿ
ನಂತರ ಅದಕ್ಕೆ ಗೋಡಂಬಿ ಹಾಕಿ ಬಾಡಿಸಿ, ನಂತರ ಈರುಳ್ಳಿ ಹಾಗೂ ಹಸಿಮೆಣಸು ಹಾಕಿ
ನಂತರ ಇದಕ್ಕೆ ಅಕ್ಕಿ ಹಾಕಿ, ನೀರು ಹಾಕಿ ವಿಶಲ್ ಕೂಗಿಸಿ.
ನಂತರ ಕೊತ್ತಂಬರಿ ಸೊಪ್ಪು ಹಾಕಿದ್ರೆ ರೈಸ್ ರೆಡಿ