Sunday, December 3, 2023

Latest Posts

ವ್ಯಾಪಾರ ಸ್ಥಳ, ಸರ್ಕಾರಿ ಕಚೇರಿಯಲ್ಲಿ ಕನ್ನಡ ನಾಮಫಲಕ ಕಡ್ಡಾಯವಾಗಲಿ: ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹ

ಹೊಸದಿಗಂತ ವರದಿ ಸಕಲೇಶಪುರ :

ಕರುನಾಡಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಹಲವಾರು ಕನ್ನಡ ಪರ ಸಂಘಟನೆಗಳು ಕನ್ನಡದ ನಾಮಫಲಕದ ಬಗ್ಗೆ ಹಲವಾರು ಹೋರಾಟಗಳನ್ನು ಮಾಡಿದ್ದರು ಸಹ ಜನ ಎಚ್ಚತ್ತು ಕೊಳ್ಳದೆ ಇರುವುದು ವಿಷಾದನೀಯ, ಪರವಾನಿಗೆ ನೀಡುವ ಸಮಯದಲ್ಲಿ ಕನ್ನಡ ಭಾಷೆ ನಾಮ ಫಲಕ ಅಳವಡಿಕೆಗೆ ಮೊದಲ ಆದ್ಯತೆ ನೀಡಬೇಕು ಎಂದು ಕರವೇ ತಾಲ್ಲೂಕು ಅಧ್ಯಕ್ಷ ರಮೇಶ್ ಪೂಜಾರಿ‌ ಆಗ್ರಹಿಸಿದರು.

ಪಟ್ಟಣದಲ್ಲಿ ತಾಲೂಕು ಆಡಳಿತ ಕಚೇರಿಗೆ ತೆರಳಿ ತಹಶೀಲ್ದಾರರಿಗೆ ಕನ್ನಡ ನಾಮಫಲಕ ಅಳವಡಿಕೆಗೆ ಮೊದಲ ಆದ್ಯತೆ ನೀಡುವಂತೆ ಮನವಿ ನೀಡಿ ಮಾತನಾಡಿದ ಅವರು, ಬೇರೆ ಭಾಷೆಯನ್ನು ದೊಡ್ಡ ಗಾತ್ರದಲ್ಲಿ ಬರೆಸಿ ಕನ್ನಡ ಭಾಷೆಯನ್ನು ಚಿಕ್ಕ ಗಾತ್ರದಲ್ಲಿ ಬರೆಸಿ ಕನ್ನಡ ಭಾಷೆಗೆ ಮಾಡಿದ ದೊಡ್ಡ ಅವಮಾನವಾಗಿದೆ.‌ತಾಲ್ಲೂಕಿನದ್ಯಾಂತ ಇರುವ ಎಲ್ಲಾ ಅಂಗಡಿ ಮುಂಗಟ್ಟು, ವ್ಯಾಪಾರ ವಹಿವಾಟು, ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಮೊದಲು ದೊಡ್ಡ ಗಾತ್ರದಲ್ಲಿ ಕನ್ನಡ ಭಾಷೆಯನ್ನು ಬರೆಸಿ ನಂತರ ಬೇರೆ ಭಾಷೆಯನ್ನು ಬಳಸಲು ಈ ಮೂಲಕ ಮನವಿ ಮಾಡುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ರವಿ ಅಗ್ನಿ, ಉಪಾಧ್ಯಕ್ಷರಾದ ನವೀನ್ ಮಾರನಹಳ್ಳಿ , ರಾಜೇಶ್ ಸಹ ಕಾರ್ಯದರ್ಶಿ, ಬಸವರಾಜ್ ಬೆಳಗೋಡು ಅಧ್ಯಕ್ಷ, ರಮೇಶ್,ಅಚಂಗಿ ಇಬ್ರಾಹಿಂ, ಲಕ್ಷ್ಮಣ, ಲೋಹಿತ್ ಧರ್ಮರಾಜ್,ಉಮಾರ್, ನಾಗೇಶ್ ಸ್ಟುಡಿಯೋ,ಜನಾರ್ಧನ್ಆಚಾರಿ, ಯುವ ಘಟಕದ ಅಧ್ಯಕ್ಷ ಕಿರಣ್, ಶಶಿಧರ್, ಸುರೇಶ್ ಮುಂತಾದವರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!