September 25, 2026
Friday, September 25, 2026
spot_img

ಮಧ್ಯಾಹ್ನದ ಊಟದ ಜೊತೆ ಒಂದೊಳ್ಳೆ ಸ್ವೀಟ್‌ ಕಾರ್ನ್‌ ಕೋಸಂಬರಿ ಮಾಡಿನೋಡಿ, ಟೇಸ್ಟ್‌ ಸೂಪರ್‌

ಸಾಮಾಗ್ರಿಗಳು
ಸ್ವೀಟ್‌ಕಾರ್ನ್‌
ಕ್ಯಾರೆಟ್‌ ತುರಿ
ದಾಳಿಂಬೆ
ಕಾಯಿತುರಿ
ಹಸಿಮೆಣಸು
ಕೊತ್ತಂಬರಿ
ಪೇರಲೆ ಹಣ್ಣು

ಮಾಡುವ ವಿಧಾನ
ಮೊದಲು ಒಂದು ಬೌಲ್‌ಗೆ ಸ್ವೀಟ್‌ ಕಾರ್ನ್‌, ನೀರು ಹಾಗೂ ಉಪ್ಪನ್ನು ಹಾಕಿ ಬೇಯಲು ಬಿಡಿ
ಆನಂತರ ಇದನ್ನು ತೆಗೆದು ತಣ್ಣಗಾಗಲು ಬಿಡಿ. ನಂತರ ಬೌಲ್‌ಗೆ ಸ್ವೀಟ್‌ಕಾರ್ನ್‌, ಹೆಚ್ಚಿದ ಪೇರಲೆ ಹಣ್ಣು, ಕೊತ್ತಂಬರಿ ಸೊಪ್ಪು, ಕಾಯಿತುರಿ, ಹಸಿಮೆಣಸು ಹಾಗೂ ಕ್ಯಾರೆಟ್‌ ತುರಿ ಹಾಕಿ ಮಿಕ್ಸ್‌ ಮಾಡಿ
ನಂತರ ಪೆಪ್ಪರ್‌ ಹಾಗೂ ಉಪ್ಪು ಸೇರಿಸಿ
ಸಣ್ಣ ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಒಣಮೆಣಸಿನಕಾಯಿ ಹಾಗೂ ಕರಿಬೇವು ಹಾಕಿ ಒಗರಣೆ ನೀಡಿ
ಒಗರಣೆ ತಣ್ಣಗಾದ ಬಳಿಕ ಹಾಕಿ ಮಿಕ್ಸ್‌ ಮಾಡಿದ್ರೆ ಕೋಸಂಬರಿ ರೆಡಿ

Must Read