FOOD | ರಾಜಸ್ಥಾನಿ ಸೈಲ್‌ನ ಲಾಲ್ ಮಾಸ್ ಮಟನ್ ಕರಿ ಮಾಡಿ ತಿಂದ್ರೆ ಬೇರೆ ಎಲ್ಲಾ ಮರೆತುಬಿಡ್ತೀರಿ

ಸಾಮಾಗ್ರಿಗಳು

ಮಟನ್ ಮಾಂಸ
ಲವಂಗ
ದಾಲ್ಚಿನ್ನಿ ಎಲೆ
ಕಪ್ಪು ಏಲಕ್ಕಿ
ಹೆಚ್ಚಿದ ಈರುಳ್ಳಿ
ತುರಿದ ಶುಂಠಿ
ತುರಿದ ಬೆಳ್ಳುಳ್ಳಿ
ಕಾಶ್ಮೀರಿ ಮೆಣಸಿನ ಪುಡಿ
ಕೆಂಪು ಮೆಣಸಿನ ಪುಡಿ
ಅರಿಶಿನ
ಮೊಸರು
ಬೆಳ್ಳುಳ್ಳಿ
ಹೆಚ್ಚಿದ ಕೊತ್ತಂಬರಿ ಸೊಪ್ಪು
ಎಣ್ಣೆ

ಮೊದಲಿಗೆ ತಳವಿರುವ ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ ನಂತರ ಉರಿಯನ್ನು ಕಡಿಮೆ ಮಾಡಿ ಲವಂಗ, ಕಪ್ಪು ಏಲಕ್ಕಿ ಮತ್ತು ದಾಲ್ಚಿನ್ನಿ ಎಲೆ ಸೇರಿಸಿ ಸಿಡಿಯಲು ಬಿಡಿ. ಲಘುವಾಗಿ ಕಂದು ಬಣ್ಣ ಬರುವವರೆಗೆ ಬೇಯಿಸಿ.
ಅದಕ್ಕೆ ಮಟನ್ ಸೇರಿಸಿ ಬೆರೆಸಿಕೊಳ್ಳಿ.
ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ 2-3 ನಿಮಿಷಗಳ ಕಾಲ ಫ್ರೈ ಮಾಡಿ.
ಬಳಿಕ ಕಾಶ್ಮೀರಿ ಮೆಣಸಿನ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಅರಿಶಿನ ಸೇರಿಸಿ ಮಟನ್ ಕಂದು ಬಣ್ಣ ಬರುವವರೆಗೆ ಸುಮಾರು 20 ನಿಮಿಷಗಳ ಕಾಲ ಹುರಿಯಿರಿ.
ಬಳಿಕ ಮೊಸರು ಮತ್ತು ಉಪ್ಪನ್ನು ಬೆರೆಸಿ 2-3 ನಿಮಿಷಗಳ ಕಾಲ ಮುಚ್ಚಳವಿಲ್ಲದೆ ಬೇಯಿಸಿ.
ಕತ್ತರಿಸಿದ ಬೆಳ್ಳುಳ್ಳಿ ಮತ್ತು ನೀರನ್ನು ಸೇರಿಸಿ, ನಂತರ ಪ್ಯಾನ್ ಅನ್ನು ಮುಚ್ಚಳದಿಂದ ಮುಚ್ಚಿ ಇನ್ನೂ 40-45 ನಿಮಿಷ ಬೇಯಿಸಿ.
ಬಳಿಕ ಉರಿಯನ್ನು ಆಫ್ ಮಾಡಿ, ಮುಚ್ಚಳವನ್ನು ತೆಗೆಯದೇ ಸುಮಾರು 2 ಗಂಟೆ ಹಾಗೇ ವಿಶ್ರಾಂತಿ ನೀಡಿ.
ಇದೀಗ ರಾಜಸ್ಥಾನಿ ಲಾಲ್ ಮಾಸ್ ಮಟನ್ ಕರಿ ತಯಾರಾಗಿದ್ದು, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!