ಹೊಸದಿಗಂತ ವರದಿ ಯಾದಗಿರಿ:
ಹನಿಟ್ರ್ಯಾಪ್ ಪ್ರಕರಣದಿಂದ ಇಡೀ ರಾಜ್ಯದ ಜನ ಅಸಹ್ಯಪಡುವ ಪರಿಸ್ಥಿತಿ ಬಂದಿದೆ. ಹನಿಟ್ರ್ಯಾಪ್ ಫ್ಯಾಕ್ಟರಿ ಇಟ್ಟಿರೋದು ಯಾರು ಎಂದು ತಿಳಿಯಬೇಕು. ಈ ಕೇಸ್‌ನ್ನು ಸಿಬಿಐಗೆ ವಹಿಸಿ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಒತ್ತಾಯಿಸಿದ್ದಾರೆ.
ಯಾವುದೇ ಪಕ್ಷದವರದಿದ್ದರೂ ಈ ರೀತಿ ಹನಿಟ್ರ್ಯಾಪ್ ನಿಂದಾಗಿ ಮುಜುಗರ ಆಗುತ್ತದೆ. ಯಾವುದೇ ಪಕ್ಷದವರಾಗಿರಲಿ ಸಿಬಿಐ ತನಿಖೆ ಮಾಡಬೇಕು. ಜನಪ್ರಿತಿನಿಧಿಗಳಿಗೆ ರಕ್ಷಣೆ ಕೊಡಬೇಕು, ಅವರ ಕ್ರೆಡಿಬಿಲಿಟಿ ಉಳಿಸಬೇಕು, ಅದಕ್ಕಾಗಿ ಈ ಹನಿಟ್ರ್ಯಾಪ್ ಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಸಿಬಿಐ ತನಿಖೆಯಾದರೆ ಮಾತ್ರ ಇದರ ಹಿಂದೆ ಯಾರಿದ್ದಾರೆಂದು ಹೊರಗಡೆ ಬರುತ್ತದೆ. ಇದಕ್ಕಿಂತ ಮುಂಚೆ ಅನೇಕರಿಗೆ ಹನಿಟ್ರ್ಯಾಪ್ ಆಗಿದೆ. ಅರವಿಂದ ಲಿಂಬಾವಳಿ, ರಮೇಶ ಜಾರಕಿಹೊಳಿ ಹಾಗೂ ಸದ್ಯ ಸಚಿವ ರಾಜಣ್ಣ ಕೂಡ ಹನಿಟ್ರ್ಯಾಪ್‌ಗೆ ಸಿಲುಕಿದ್ದಾರೆ. ಇದರ ಆಳಕ್ಕೆ ಇಳಿದು ಬುಡದಿಂದ ಸಮಸ್ಯೆ ಸರಿಪಡಿಸಬೇಕು ಎಂದಿದ್ದಾರೆ.