ಹೊಸದಿಗಂತ ಡಿಜಿಟಲ್ ಡೆಸ್ಕ್:
ರೀಲ್ಸ್ ಪ್ರಿಯರಿಗೆ, ಕಂಟೆಂಟ್ ಕ್ರಿಯೇಟಿಂಗ್ ಆಸಕ್ತಿ ಇರುವವರಿಗೆ ರಾಜ್ಯ ಸರ್ಕಾರ ನಗದು ಬಹುಮಾನ ಗೆಲ್ಲಲು ಅವಕಾಶವೊಂದನ್ನು ನೀಡಿದೆ.
ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ ರೀಲ್ಸ್ ಮಾಡಿ ನಗದು ಗೆಲ್ಲುವ ಅವಕಾಶವನ್ನು ಸರ್ಕಾರ ನೀಡಿದ್ದು, ಪ್ರಥಮ ಬಹುಮಾನವಾಗಿ 50 ಸಾವಿರ ರೂಪಾಯಿ, ದ್ವಿತೀಯ ಬಹುಮಾನವಾಗಿ 25 ಸಾವಿರ ಹಾಗೂ ತೃತೀಯ ಬಹುಮಾನವಾಗಿ 15 ಸಾವಿರ ರೂಪಾಯಿ ಗೆಲ್ಲುವ ಅವಕಾಶ ನೀಡಿದೆ.
ಮೂಲಭೂತ ಕರ್ತವ್ಯಗಳು, ಸಂವಿಧಾನದ ಮಹತ್ವ, ಮೂಲಭೂತ ಹಕ್ಕುಗಳು, ಪೀಠಿಕೆಯ ವೈಶಿಷ್ಟ್ಯ ಅಥವಾ ಸಂವಿಧಾನಕ್ಕೆ ಸಂಬಂಧಿಸಿದ ಇನ್ಯಾವುದೇ ಅಂಶಗಳುಳ್ಳ ರೀಲ್ಸ್ ಮಾಡಬಹುದಾಗಿದೆ.