Wednesday, June 7, 2023

Latest Posts

ಮದುವೆ ಹಿಂಟ್​ ಕೊಟ್ಟು ವಿಮಾನ ಏರಿದ ಮಲೈಕಾ ಅರೋರಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬಾಲಿವುಡ್ ನಟಿ ಮಲೈಕಾ ಅರೋರಾ (Malaika Arora) ಮತ್ತು ನಟ ಅರ್ಜುನ್ ಕಪೂರ್ (Arjun Kapoor) ನಡುವಿನ ಪ್ರೀತಿ ವಿಚಾರ ಎಲ್ಲರಿಗು ಗೊತ್ತಿರುವುದೇ. ವಯಸ್ಸಿನ ಅಂತರದ ನಡುವೆಯೂ ಇಬ್ಬರು ಪ್ರೀತಿಸುತ್ತಿದ್ದು,ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಇದೀಗ ಇಬ್ಬರೂ ಮದುವೆ ಆಗುವ ಆಲೋಚನೆ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಮೊನ್ನೆಯಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಲೈಕಾ, ‘ಈಗಾಗಲೇ ನಾನು ಪ್ರಿ ಹನಿಮೂನ್ ಹಂತ ತಲುಪಿದ್ದೇವೆ. ಮದುವೆ (Marriage) ಅನ್ನೋದು ವೈಯಕ್ತಿಕವಾದದ್ದು. ನಮಗೂ ಮದುವೆ ಆಗಬೇಕು ಅಂತ ಅನಿಸಿದೆ’ ಎಂದು ಹೇಳಿದ್ದರು. ಈ ಮಾತು ಸಖತ್ ವೈರಲ್ ಕೂಡ ಆಗಿತ್ತು.

ಕೆಲ ದಿನಗಳ ಹಿಂದೆ, ಮಲೈಕಾ ಸಂದರ್ಶನವೊಂದರಲ್ಲಿ ಅರ್ಜುನ್​ ಕಪೂರ್​ ಅವರನ್ನು ಮದುವೆಯಾಗಲು ರೆಡಿ ಎಂದು ಹೇಳಿದ್ದರು. ನಮ್ಮಿಬ್ಬರ ನಡುವೆ ವಯಸ್ಸಿನ ಅಂತರವಿದೆ. ಆದರೆ ಇದು ನಮ್ಮ ನಡುವೆ ಎಂದಿಗೂ ಸಮಸ್ಯೆಯಾಗಿಲ್ಲ. ಅರ್ಜುನ್ ಕಪೂರ್ ಬಹಳ ವಿವೇಚನೆ ಹಾಗೂ ಕಾಳಜಿಯುಳ್ಳ ವ್ಯಕ್ತಿ. ನಾನು ಅವನ ಗುಣಗಳನ್ನು ಹೆಚ್ಚು ಮೆಚ್ಚುತ್ತೇನೆ ಎಂದು ಮಲಿಕಾ ತಿಳಿಸಿದ್ದರು.

ಆದರೆ ಇದೀಗ ಕುತೂಹಲದ ಘಟ್ಟದಲ್ಲಿ ಮದುವೆಯ ಸುಳಿವು ನೀಡಿದ ಬೆನ್ನಲ್ಲೇ ಈ ಜೋಡಿ ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಇಬ್ಬರೂ ಲಗುಬಗೆಯಿಂದ ಹೋಗುತ್ತಿರುವ ವಿಡಿಯೋ ವೈರಲ್​ ಆಗಿದ್ದು, ಥಹರೇವಾರಿ ಕಮೆಂಟ್​ಗಳಿಗೆ ಕಾರಣವಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!