Thursday, February 9, 2023

Latest Posts

ಬಾಲಿವುಡ್ ನಲ್ಲಿ ಮತ್ತೊಂದು ಹೊಸ ಶೋ: ಮಲೈಕಾ ಅರೋರಾ ಜೊತೆ ಬಿಸಿ ಬಿಸಿ ಚರ್ಚೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ನಟಿ ಮಲೈಕಾ ಅರೋರಾ ಅವರು ತಮ್ಮ ಸಿನಿಮಾಗಳಿಗಿಂತ ಡ್ರೆಸ್ಸಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚು ಪ್ರಸಿದ್ದಿ. 49ರ ಹರೆಯದಲ್ಲೂ ಹಾಟ್ ಫೋಟೋಗಳನ್ನು ಹಾಕುತ್ತಾ ಐಟಂ ಸಾಂಗ್ ಗಳನ್ನು ಹಾಡಿ ಪಡ್ಡೆ ಹುಡುಗರ ಮನಸು ಕದಿಯುತ್ತಿದ್ದಾರೆ. ಇದೆಲ್ಲಾ ಸಾಕು ಎಂಬಂತೆ ತನಗಿಂತ 12 ವರ್ಷ ಚಿಕ್ಕವನಾದ ಅರ್ಜುನ್ ಕಪೂರ್ ಜೊತೆ ಡೇಟ್ ಮಾಡಿದ್ದಾಳೆ. ಈ ನಿಟ್ಟಿನಲ್ಲಿ ಮಲೈಕಾ ಬಾಲಿವುಡ್ ನಲ್ಲಿ ಸದಾ ಟ್ರೆಂಡಿಂಗ್‌ನಲ್ಲಿದ್ದಾರೆ.

ಈಗಾಗಲೇ ಬಾಲಿವುಡ್‌ನಲ್ಲಿ ಸಾಕಷ್ಟು ಜನಪ್ರಿಯ ಕಾರ್ಯಕ್ರಮಗಳಿವೆ. ಬಾಲಿವುಡ್ ತಾರೆಯರು ಕೂಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಇದೀಗ ಮಲೈಕಾ ಅರೋರಾ ಕೂಡಾ ಹೊಸ ಕಾರ್ಯಕ್ರಮದ ನಿರೂಪಕಿಯಾಗಲಿದ್ದಾರೆ. Hotstar OTT ನಲ್ಲಿ ಮೂವಿಂಗ್ ಇನ್ ವಿಥ್ ಮಲೈಕಾ ಎಂಬ ಹೊಸ ಶೋ ಬರುತ್ತಿದೆ. ಇದಕ್ಕೆ ಸಂಬಂಧಿಸಿದ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಕಾರ್ಯಕ್ರಮವು ಡಿಸೆಂಬರ್ 5 ರಿಂದ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

ಈ ಶೋನಲ್ಲಿ ಮಲೈಕಾ ತಮ್ಮ ಜೀವನದ ಅನುಭವಗಳು, ಚಿತ್ರರಂಗದ ಜೊತೆಗೆ ಅನೇಕ ಅತಿಥಿಗಳ ಬಗ್ಗೆ ಮಾತನಾಡುತ್ತಾರೆ. ಶೋನಲ್ಲಿ ರೊಮ್ಯಾಂಟಿಕ್ ಟಾಕ್ಸ್ ಮತ್ತು ಹಾಟ್ ಟಾಕ್ಸ್ ಬಗ್ಗೆ ಮಾಡುತ್ತೇನೆ ಎಂದು ಮಲೈಕಾ ಹೇಳಿದ್ದಾರೆ. ಬೋಲ್ಡ್ ಡ್ರೆಸ್ಸಿಂಗ್ ಮತ್ತು ಬೋಲ್ಡ್ ನಿರ್ಧಾರಗಳಿಂದ ವೈರಲ್ ಆಗುತ್ತಿರುವ ಮಲೈಕಾ ಈ ಶೋನಲ್ಲಿ ಎಷ್ಟು ಬೋಲ್ಡ್ ಆಗಿ ಮಾತನಾಡುತ್ತಾರಾ ಎಂದು ನೋಡೋಣ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!