ಹೊಸದಿಗಂತ ವರದಿ,ಕಲಬುರಗಿ(ಮಳಖೇಡ):
ಸೇಡಂ ತಾಲೂಕಿನ ಮಳಖೇಡದಲ್ಲಿ ಮೂರುದಿನ ನಡೆದ ಶ್ರೀಮನ್ ಸುಧಾ ಮಂಗಲ ಕಾರ್ಯಕ್ರಮವು ಶನಿವಾರ ಅದ್ದೂರಿಯಾಗಿ ಸಮಾರೋಪಗೊಂಡಿತು.
ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಹತ್ತು ಮಠದ ಪೀಠಾಧಿಪತಿಗಳು ಮಳಖೇಡದಲ್ಲಿಯೇ ಶ್ರೀ ಜಯತೀರ್ಥರ ಮೂಲ ವೃಂದಾವನ ಇದೆ ಎಂದು ನಿರ್ಣಯ ಕೈಗೊಂಡರು.
ಇದಕ್ಕೆ ಅನೆಕ ಪುರಾವೆಗಳಿವೆ ಎಂದು ನುಡಿದ ಅವರು, ಸರಿಯಾಗಿ ತಿಳಿದುಕೊಳ್ಳದೆ ಅಪ ಪ್ರಚಾರ ಮಾಡುವುದು ಉಚಿತವಲ್ಲ ಎಂದು ಯತಿಗಳು ಹೇಳಿದರು.
ಪ್ರತಿದಿನ ವಿದ್ವಾಸರಿಂದ ಪ್ರವಚನ, ಸುಧಾ ವಿದ್ಯಾರ್ಥಿಗಳಿಂದ ಸುಧಾ ಅನುವಾದ, ಸುಧಾ ಪರೀಕ್ಷೆ ಹಾಗೂ ಯತಿಗಳಿಂದ ಅಮೃತೋಪದೇಶ ನಡೆದವು.
20 ವಿದ್ಯಾರ್ಥಿಗಳು ಸುಧಾ ಅನುವಾದ ಮಂಡಿಸಿ ಪಂಡಿತರಾಗಿ.ಹೊರಹೊಮ್ಮಿದರು..ಗುರುಕುಲದಲ್ಲಿದ್ದು 13 ವರ್ಷ ಅಭ್ಯಾಸ ಮುಗಿಸಿ ಸುಧಾ ಪಂಡಿತರಾಗಿ ಹೊರ ಬಂದ 20 ವಿದ್ಯಾರ್ಥಿಗಳು ಶ್ರೀ ಸತ್ಯಾತ್ಮತೀರ್ಥರಿಗೆ ಗುರು ಕಾಣಿಕೆ ನೀಡಿದರು.
ಎಲ್ಲವಿದ್ಯಾರ್ಥಿಗಳಿಗೆ ಶ್ರೀಪಾದಂಗಳವರು ಸತ್ಕರಿಸಿ ಶುಭಕೋರಿದರು.