ಹೊಸದಿಗಂತ ವರದಿ,ಶ್ರೀರಂಗಪಟ್ಟಣ :
ಪಟ್ಟಣದ ಪುರಸಭೆ ಯಲ್ಲಿ ಪ್ರಭಾರ ಸಮುದಾಯ ಸಂಬಂಧ ಅಧಿಕಾರಿ (ಕಮ್ಯೂನಿಟಿ ಅಫೇರ್ ಆಫಿಸರ್) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆರ್. ನಾಗೇಂದ್ರ ಬಿಲ್ ಪಾಸ್ ಮಾಡಲು 40 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.
ಆರ್. ನಾಗೇಂದ್ರ ಮಳವಳ್ಳಿ ಪುರಸಭೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಶ್ರೀರಂಗಪಟ್ಟಣ ಪುರಸಭೆಯಲ್ಲಿ ಪ್ರಭಾರ ಅಧಿಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಲಿಂಬಾ ಮೊಟಾರ್ಸ್ ಸಂಸ್ಥೆ ವತಿಯಿಂದ ಮಳವಳ್ಳಿ ಪುರಸಭಾ ವ್ಯಾಪ್ತಿಯ ವಿಶೇಷ ಚೇತನರಿಗೆ ವಿತರಣೆ ಮಾಡುವ 15 ತ್ರಿಚಕ್ರವಹನವನ್ನು ಈಗಾಗಲೇ ಸರಬರಾಜು ಮಾಡಿದ್ದು, ಅದರ ಬಿಲ್ ಪಾಸ್ ಮಾಡುವ ಸಲು ವಾಗಿ 15% ಒಟ್ಟಾರೆ, 1 ಲಕ್ಷದ 20 ಸಾವಿರ ರು.ಗಳಿಗೆ ಬೇಡಿಕೆ ಇಟ್ಟಿದ್ದ ಎಂದು ತಿಳಿದು ಬಂದಿದೆ. ಲಿಂಬಾ ಮೊಟಾರ್ಸ್ ವ್ಯವಸ್ಥಾ ಪಕ ಶಿವರಾಜ್ ಬಲ್ಲಾಳ ಅವರು ಸೋಮ ವಾರ ಲೋಕಾಯುಕ್ತ ಕಚೇರಿಗೆ ಬೇಟಿ ನೀಡಿ ದೂರು ನೀಡಿದ್ದ ಹಿನ್ನಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮುಂಗಡವಾಗಿ ನೀಡುತ್ತಿದ್ದ 40 ಸಾವಿರ ರು. ಹಣ ಸಹಿತ ಆರ್. ನಾಗೇಂದ್ರ ನನ್ನು ವಶಕ್ಕೆ ಪಡೆದು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಮಂಡ್ಯ ಲೋಕಾಯುಕ್ತ ಎಸ್‌ಪಿ ಸಚ್ಚಿತ್ ನೇತೃತ್ವದಲ್ಲಿ, ಡಿವೈಎಸ್‌ಪಿ ಸುನೀಲ್‌ಕುಮಾರ್, ಇನ್ಸ್‌ಪೆಕ್ಟರ್ ಬ್ಯಾಟ ರಾಯಿಗೌಡ, ಸಿಬ್ಬಂದಿಗಳಾದ ಶಂಕರ್, ನಂಧೀಶ್, ಶರತ್, ನವೀನ್ ಸೇರಿದಂತೆ ಇತರರು ಇದ್ದರು.