April 13, 2026
Monday, April 13, 2026
spot_img

ಮಲಯಾಳಂ ನಟ ದಿಲೀಪ್‌ ಗೆ ಮತ್ತೆ ಸಂಕಷ್ಟ: ಹೈಕೋರ್ಟ್‌ ಮೊರೆಹೋದ ಕೇರಳ ಸರ್ಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

2017ರ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳ ಚಿತ್ರನಟ ದಿಲೀಪ್‌ ಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಕೇರಳ ಸರ್ಕಾರ ಶುಕ್ರವಾರ, ಸೆಷನ್ಸ್‌ ನ್ಯಾಯಾಲಯದ ಆದೇಶದ ವಿರುದ್ಧ ಕೇರಳ ಸರ್ಕಾರ ಶುಕ್ರವಾರ ಹೈಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದೆ.

ದೋಷಿಗಳಾಗಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ 6 ಮಂದಿಯ ಶಿಕ್ಷೆಯನ್ನು ಮತ್ತಷ್ಟು ಕಠಿಣಗೊಳಿಸಬೇಕು ಎಂದೂ ಅರ್ಜಿಯಲ್ಲಿ ಕೋರಲಾಗಿದೆ.

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 8ನೇ ಅರೋಪಿಯಾಗಿರುವ ದಿಲೀಪ್ ಸೇರಿ ಚಾರ್ಲಿ ಥೋಮಸ್ (ಎ7), ಸುನಿಲ್ ಕುಮಾರ್ ಅಲಿಯಾಸ್ ಮೇಸ್ತ್ರಿ ಸನಿಲ್ (ಎ9) ಹಾಗೂ ಶರತ್ (ಎ 15) ಅವರನ್ನು ಕೋರ್ಟ್ ಖುಲಾಸೆಗೊಳಿಸಿತ್ತು.

ಪ್ರಕರಣದ ಮೊದಲ ಆರು ಆರೋಪಿಗಳಾದ ಸುನಿಲ್ ಅಲಿಯಾಸ್ ಪಲ್ಸರ್ ಸುನಿ, ಮಾರ್ಟಿನ್ ಆಂಟೋನಿ, ಮಣಿಕಂಠನ್ ಬಿ. ವಿಜೇಶ್ ವಿ ಪಿ, ಸಲೀಂ ಎಚ್ ಮತ್ತು ಪ್ರದೀಪ್ ಅವರನ್ನು ನ್ಯಾಯಾಲಯವು ದೋಷಿಗಳೆಂದು ಘೋಷಿಸಿ ಶಿಕ್ಷೆ ವಿಧಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !