Wednesday, October 5, 2022

Latest Posts

ನಿತ್ಯಾ ಮೆನನ್‌ಗೆ ಯೂಟ್ಯೂಬರ್‌ನಿಂದ ಮಾನಸಿಕ ಕಿರುಕುಳ: ಇದೆಲ್ಲಾ ಸುಳ್ಳು ಎಂದ ಸಿನಿಮಾ ವಿಮರ್ಶಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಹುಭಾಷಾ ನಟಿ, ಮಲಯಾಳಿ ಕುಟ್ಟಿ ನಿತ್ಯಾ ಮೆನನ್‌ಗೆ ಮಲಯಾಳಂನ ಸಂತೋಷ್ ವರ್ಕಿ ಎಂಬ ಯೂಟ್ಯೂಬರ್, ಸಿನಿಮಾ ವಿಮರ್ಶಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿದ್ರು. ತನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ಮದುವೆಯಾಗುವುದಾಗಿ ಹೇಳುತ್ತಿದ್ದಾನೆ ಎಂದ ನಿತ್ಯಾ ಮೆನನ್‌ ಆತನ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ರು. ಈ ಬಗ್ಗೆ ನಟಿಯ ಪೋಷಕರು ಕೂಡ ಆತನಿಗೆ ಗಂಭೀರ ಎಚ್ಚರಿಕೆ ನೀಡಿದ್ದು, ಈ ಸುದ್ದಿ ಈಗ ಚಿತ್ರರಂಗದಲ್ಲಿ ಹಾಟ್ ಟಾಪಿಕ್ ಆಗಿವೆ.

ಈ ಬಗ್ಗೆ ಸಂತೋಷ್ ವರ್ಕಿ ಮಲಯಾಳಂ ಯೂಟ್ಯೂಬ್ ಚಾನೆಲ್‌ ಸಂದರ್ಶನವೊಂದರಲ್ಲಿ ನಿತ್ಯಾ ಮೆನನ್ ಕಮೆಂಟ್‌ಗಳಿಗೆ ಪ್ರತಿಕ್ರಿಯಿಸಿ,  ”ನಿತ್ಯಾಮಿನನ್ ಹೇಳುತ್ತಿರುವುದರಲ್ಲಿ ಯಾವುದೇ ಸತ್ಯವಿಲ್ಲ. 30 ನಂಬರ್‌ಗಳಿಂದ ಕರೆ ಮಾಡುತ್ತಿರುವುದಾಗಿ ದೂರಿದ್ದಾರೆ. ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಅಷ್ಟು ಸಿಮ್ ಕಾರ್ಡ್ ಕೊಡ್ತಾರಾ ಎಂಬುದು ಯೋಚನೆ ಮಾಡಬೇಕಾದ ವಿಚಾರ. ನಿತ್ಯಾ ಮೆನನ್ ಬೇರೆಯವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಅವರ ತಾಯಿ ಹೇಳ್ತಾರೆ, ಅವರ ತಂದೆ ಎಂಗೇಜ್ ಮೆಂಟ್ ಆಗಿಲ್ಲ ಅಂತಾರೆ. ನನ್ನ ವಿರುದ್ಧವೂ ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸಲು ಯತ್ನಿಸುತ್ತಿದ್ದಾರೆ. ಮೊದಲು ನಾನು ನಿತ್ಯಾ ಮೆನನ್ ಅವರನ್ನು ಪ್ರೀತಿಸಿದ್ದು ನಿಜ, ನಾನು ಅವನನ್ನು ಮದುವೆಯಾಗಲು ಬಯಸಿದ್ದೂ ನಿಜ. ಆದರೆ ಈಗ ನಾನು ಸತ್ತರೂ ಅವಳನ್ನು ಮದುವೆಯಾಗುವುದಿಲ್ಲ. ನಿತ್ಯಾ ಮೆನನ್ ಬಗ್ಗೆ ಇದೆಲ್ಲ ಮೊದಲೇ ತಿಳಿದಿದ್ದರೆ ಅವರನ್ನು ಪ್ರೀತಿಸುತ್ತಿರಲಿಲ್ಲ” ಎಂದು ಕಾಮೆಂಟ್ ಮಾಡಿದ್ದಾರೆ.

ಇದಕ್ಕೆ ಹಲವು ನೆಟ್ಟಿಗರು, ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ. ನಿತ್ಯಾ ಮೆನನ್ ಅವರನ್ನು ನೀನು ತಿರಸ್ಕಾರ ಮಾಡೋದೇನು? ಅಸಲು ನೀನ್ಯಾರು, ಎಷ್ಟು ಜನರಿಗೆ ನಿನ್ನ ಬಗ್ಗೆ ಗೊತ್ತು? ಫೇಕ್ ಸಿಮ್ ಕಾರ್ಡ್ ಗಳ ಮೂಲಕ ಕರೆ ಮಾಡಿರುತೀಯಾ, ನಿತ್ಯಾ ಮೆನನ್ ಅವರನ್ನು ಪ್ರೀತಿಸುವ ರೇಂಜ್ ನಿನಗಿದ್ಯಾ? ಎಂದು ಆ ಯೂಟ್ಯೂಬರ್‌ನನ್ನು ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!