ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಯ್‌ಕಾಟ್ ಮಾಲ್ಡೀವ್ಸ್ ( # Boycott Maldives) ಅಭಿಯಾನಕ್ಕೆ ಎಲ್ಲೆಡೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಭಾರತದ ಬಗ್ಗೆ ಹಾಗೂ ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದಕ್ಕೆ ಮಾಲ್ಡೀವ್ಸ್ ಬೆಲೆ ತೆರುತ್ತಿದೆ.
ಇದೀಗ ಈಸ್ ಮೈ ಟ್ರಿಪ್ ( Ease my trip) ಮಾಲ್ಡೀವ್ಸ್ ಫ್ಲೈಟ್ ಟಿಕೆಟ್‌ಗಳ ಬುಕ್ಕಿಂಗ್‌ನ್ನೇ ರದ್ದು ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಭಾರತೀಯರು ಮಾಲ್ಡೀವ್ಸ್ ಪ್ರವಾಸ ರದ್ದು ಮಾಡಬೇಕೆಂದು ಟ್ರೆಂಡ್ ಸೃಷ್ಟಿ ಮಾಡಿದ್ದಾರೆ.
ಇದಕ್ಕೆ ಈಸ್ ಮೈ ಟ್ರಿಪ್ ಕೂಡ ಸಾಥ್ ನೀಡಿ ಫ್ಲೈಟ್ ಬುಕ್ಕಿಂಗ್ ರದ್ದು ಮಾಡಿದೆ. ಭಾರತೀಯರಿಗೆ ಬೆಂಬಲ ಕೊಡುವುದು ಭಾರತೀಯರ ಕರ್ತವ್ಯ. ಫ್ಲೈಟ್ ಟಿಕೆಟ್‌ಗಳ ಬುಕ್ಕಿಂಗ್ ರದ್ದು ಮಾಡಿ ನಮ್ಮ ನಿರ್ಧಾರ ಕೈಗೊಂಡಿದ್ದೇವೆ ಎಂದು ಈಸ್ ಮೈ ಟ್ರಿಪ್ ಸಿಇಒ ನಿಶಾಂತ್ ಪಿಟ್ಟಿ ತಿಳಿಸಿದ್ದಾರೆ.