ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಮರಾಜನಗರದ ಹನೂರು ತಾಲೂಕಿನ ಶ್ರೀ ಮಲೆ ಮಹದೇಶ್ವರಸ್ವಾಮಿ ದೇಗುಲದ ಹುಂಡಿ ಹಣ ಎಣಿಕೆ ನಡೆದು, ಬರೋಬ್ಬರಿ 2.7 ಕೋಟಿ ಹಣ ಸಂಗ್ರಹವಾಗಿದೆ.
ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಈ ಕುರಿತು ಮಾಹಿತಿ ನೀಡಿದ್ದು, 34 ದಿನಗಳಿಗೆ ಹುಂಡಿಯಲ್ಲಿ 2,77,99,396 ರೂ. ಸಂಗ್ರಹವಾಗಿದೆ.
ಭಕ್ತರು ಕಾಣಿಕೆ ರೂಪದಲ್ಲಿ 73 ಗ್ರಾಂ ಚಿನ್ನ ಹಾಗೂ 3.9 ಕೆಜಿ ಬೆಳ್ಳಿಯನ್ನು ಅರ್ಪಿಸಿದ್ದಾರೆ.
ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ನೇತೃತ್ವದಲ್ಲಿ ಹುಂಡಿ ಹಣ ಎಣಿಕೆ ನಡೆದಿದ್ದು, ಶಕ್ತಿ ಯೋಜನೆ ಪರಿಣಾಮ ಲಕ್ಷಾಂತರ ಮಂದಿ ಭಕ್ತರ ಕ್ಷೇತ್ರಕ್ಕೆ ಬಂದಿದ್ದರು. ಈ ಹಿನ್ನೆಲೆ ಕೇವಲ 34 ದಿನಗಳಿಗೆ 2.77 ಕೋಟಿ ಹಣ ಸಂಗ್ರಹವಾಗಿದೆ.