ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಝಾಕಿಸ್ತಾನದ ಅಕ್ಟೌ ನಗರದಲ್ಲಿ ಸುಮಾರು 72 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಏಕಾಏಕಿ ಪತನಗೊಂಡಿದೆ ಪತನಗೊಂಡ ವಿಮಾನದಲ್ಲಿ 72 ಪ್ರಯಾಣಿಕರು ಇದ್ದರು ಎಂದು ಕಝಾಕಿಸ್ತಾನದ ತುರ್ತು ಸಚಿವಾಲಯ ತಿಳಿಸಿದೆ.
ಅಜರ್‌ಬೈಜಾನ್ ಏರ್‌ಲೈನ್ಸ್ ವಿಮಾನವು ಬಾಕುದಿಂದ ರಷ್ಯಾದ ಚೆಚೆನ್ಯಾದ ಗ್ರೋಜ್ನಿಗೆ ತೆರಳುತ್ತಿತ್ತು. ಆದರೆ ಗ್ರೋಜಿಯಲ್ಲಿ ಅತಿಯಾದ ಮಂಜು ಆವರಿಸಿದ ಮಾರ್ಗವನ್ನು ಬದಲಾಯಿಸಲಾಯಿತು ಎಂದು ಸುದ್ದಿ ಸಂಸ್ಥೆಗಳು ತಿಳಿಸಿವೆ. ಈ ಅಪಘಾತದ ಮೊದಲು ವಿಮಾನ ನಿಲ್ದಾಣದ ಮೇಲೆ ಹಲವಾರು ಬಾರಿ ಸುತ್ತು ಹಾಕಿತ್ತಂತೆ.ವಿಮಾನ ನಿಲ್ದಾಣದ ಬಳಿಯ ತೆರೆದ ಮೈದಾನದಲ್ಲಿ ವಿಮಾನ ಲ್ಯಾಂಡಿಂಗ್ ಆಗಿದೆ. ಲ್ಯಾಂಡ್ ಆದ ಕೂಡಲೇ ಬೆಂಕಿ ಹೊತ್ತಿಕೊಂಡಿದೆ. ಐವರು ಸಿಬ್ಬಂದಿಯೊಂದಿಗೆ 62 ಪ್ರಯಾಣಿಕರು ವಿಮಾನದಲ್ಲಿದ್ದರು ಮತ್ತು ಕೆಲವು ಜನರು ಅಪಘಾತದಿಂದ ಬದುಕುಳಿದಿದ್ದಾರೆ.
ಇನ್ನೂ ಈ ಘಟನೆಯಲ್ಲಿ ಹಲವರು ಮಂದಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ವಿಮಾನ ಪತನಗೊಂಡ ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ದೌಡಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ. ಬಳಿಕ ಘಟನೆಯಲ್ಲಿ ಬದುಕುಳಿದವನ್ನು ಹತ್ತಿರದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.