August 17, 2026
Monday, August 17, 2026
spot_img

ಗ್ರೇವಿ & More 86 | ಮಲೆನಾಡು ಶೈಲಿಯ ಸಾಂಪ್ರದಾಯಿಕ ಹಲಸಿನಕಾಯಿ ಪಲ್ಯ ಮಾಡುವ ಸುಲಭ ರೆಸಿಪಿ ಇಲ್ಲಿದೆ

ಹಲಸಿನಕಾಯಿ ಪಲ್ಯ ಕರ್ನಾಟಕದ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಬೇಸಿಗೆಯ ಆರಂಭದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ತಪ್ಪದೇ ಮಾಡುವ ಅತ್ಯಂತ ಸಾಂಪ್ರದಾಯಿಕ ಹಾಗೂ ರುಚಿಕರವಾದ ಖಾದ್ಯವೆಂದರೆ ಅದು ಹಲಸಿನಕಾಯಿ ಪಲ್ಯ. ಇದನ್ನು ಬಿಸಿ ಅನ್ನ-ಸಾರು, ರೊಟ್ಟಿ ಅಥವಾ ಚಪಾತಿಯೊಂದಿಗೆ ಸವಿಯಲು ಅತ್ಯುತ್ತಮ ಕಾಂಬಿನೇಷನ್ ಆಗಿದೆ.

ಬೇಕಾಗುವ ಸಾಮಗ್ರಿಗಳು

ಹಸಿ ಹಲಸಿನಕಾಯಿ
ಉಪ್ಪು
ಅರಿಶಿನ ಪುಡಿ
ಬೆಲ್ಲ ಮತ್ತು ಹುಳಿ ನೀರು
ತೆಂಗಿನ ತುರಿ
ಒಣ ಮೆಣಸಿನಕಾಯಿ
ಸಾಸಿವೆ
ಕೊತ್ತಂಬರಿ ಬೀಜ
ಎಣ್ಣೆ
ಉದ್ದಿನಬೇಳೆ
ಕಡ್ಲೆಬೇಳೆ
ಕರಿಬೇವು
ಇಂಗು

ತಯಾರಿಸುವ ವಿಧಾನ

ಮೊದಲು ಹೆಚ್ಚಿದ ಹಲಸಿನಕಾಯಿ ತುಂಡುಗಳನ್ನು ಕುಕ್ಕರ್‌ನಲ್ಲಿ ಸ್ವಲ್ಪ ನೀರು, ಉಪ್ಪು ಮತ್ತು ಅರಿಶಿನ ಹಾಕಿ 2 ಸೀಟಿ ಕೂಗಿಸಿ ಬೇಯಿಸಿಕೊಳ್ಳಬೇಕು. ಅದು ಬೆಂದ ನಂತರ ನೀರನ್ನು ಸಂಪೂರ್ಣವಾಗಿ ಬಸಿದು, ಹೋಳುಗಳನ್ನು ಕೈಯಿಂದ ಅಥವಾ ಮಜ್ಜಿಗೆ ಕಡೆಯುವ ಕಾವಿನಿಂದ ಲಘುವಾಗಿ ಜಜ್ಜಿ ಪುಡಿ ಮಾಡಿಕೊಳ್ಳಬೇಕು. ನಂತರ ಒಂದು ಮಿಕ್ಸಿ ಜಾರ್‌ಗೆ ತೆಂಗಿನ ತುರಿ, ಸಾಸಿವೆ, ಕೊತ್ತಂಬರಿ ಬೀಜ ಮತ್ತು ಒಣಮೆಣಸಿನಕಾಯಿ ಹಾಕಿ, ನೀರು ಹಾಕದೆ ತರಿತರಿಯಾಗಿ ಪುಡಿ ಮಾಡಿಕೊಳ್ಳಬೇಕು. ಬಳಿಕ ಒಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಬೇಳೆಗಳು, ಕರಿಬೇವು ಮತ್ತು ಇಂಗು ಹಾಕಿ ಕೆಂಪಗಾಗಿಸಿಕೊಂಡು. ನಂತರ ಒಗ್ಗರಣೆಗೆ ಜಜ್ಜಿದ ಹಲಸಿನಕಾಯಿ, ಬೆಲ್ಲ, ಹುಳಿ ನೀರು ಹಾಕಿ 2 ನಿಮಿಷ ಕೈಯಾಡಿಸಿದ ಬಳಿಕ ಸಿದ್ಧಪಡಿಸಿದ ಮಸಾಲೆ ಪುಡಿಯನ್ನು ಸೇರಿಸಿ, ಉಪ್ಪು ಚೆಕ್ ಮಾಡಿ, ಸಣ್ಣ ಉರಿಯಲ್ಲಿ 2-4 ನಿಮಿಷ ಚೆನ್ನಾಗಿ ಕೈಯಾಡಿಸಿದ ರುಚಿರುಚಿಯಾದ ಹಲಸಿನಕಾಯಿ ಪಲ್ಯ ಸಿದ್ಧವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !