ಫೆ. 28ರಿಂದ ಮಲ್ಲಮ್ಮನ ಬೆಳವಡಿ ಉತ್ಸವ ಆಚರಣೆ, ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಳಗಾವಿ ಜಿಲ್ಲೆಯ, ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ಮಲ್ಲಮ್ಮನ ಬೆಳವಡಿ ಉತ್ಸವವನ್ನು ಫೆಬ್ರವರಿ 28 ರಿಂದ ಮಾರ್ಚ್ 1ರಂದು ಎರಡು ದಿನಗಳ ಕಾಲ ಆಚರಿಸಲು ಬೆಳಗಾವಿ ಜಿಲ್ಲಾಡಳಿತ ತೀರ್ಮಾನಿಸಿದೆ.

ಇದರ ಅಂಗವಾಗಿ ಉತ್ಸವಕ್ಕೆ ಮಲ್ಲಮ್ಮನ ತವರೂರಾದ ಶಿರಸಿ ತಾಲೂಕಿನ ಸುಧಾಪುರ ಕ್ಷೇತ್ರದ ಸೋಂದಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಂತರ ಮಠದಿಂದ ಶ್ರೀ ದೇವರಿಗೆ ಪೂಜೆ ಸಲ್ಲಿಸಿ ಜ್ಯೋತಿ ಬೆಳಗಿಸಲಾಯಿತು. ನಂತರ ಮಾತೆಯರಿಗೆ ಅರಿಶಿಣ ಕುಂಕುಮ ನೀಡಿ ತವರೂರ ಬಾಗೀನ, ಉಡಿತುಂಬುವ ಕಾರ್ಯಕ್ರಮವನ್ನ ನಡೆಸಲಾಯಿತು.

ಪೂಜಾ ಕೈಂಕರ್ಯವನ್ನು ಇಂದು ಮುಂಜಾನೆ 10 ಗಂಟೆಗೆ ಆಚಾರ್ಯ ಜಯಲಿಂಗ ಸ್ವಾಮಿ ಮಹಂತೀನ್ ಮಠ ಇವರ ನೇತೃತ್ವದಲ್ಲಿ ಮಲ್ಲಿಕಾರ್ಜುನ್ ಮಹಂತಿನ ಮತ್ತು ನಾಗರಾಜ ಮಹಂತಿನ್ ಮಠ ನೆರವೇರಿಸಿದರು.

1995 ರಿಂದ ಸುಧಾಪುರ ಕ್ಷೇತ್ರದಲ್ಲಿ ಎಲ್ಲಾ ಐತಿಹಾಸಿಕ ಗುಡಿ ಗೋಪುರಗಳ ಸಂರಕ್ಷಣೆಯನ್ನು ಸೋಂದ ಜಾಗೃತ ವೇದಿಕೆ ಮಾಡುತ್ತಿದೆ. 2012ರಿಂದ ಬೆಳವಡಿಯ ಮಲ್ಲಮ್ಮನ ಉತ್ಸವಕ್ಕೆ ಅವಳ ತವರೂರನಿಂದ ಜ್ಯೋತಿ ಒಯ್ಯುವ ಐತಿಹಾಸಿಕ ಕ್ಷಣಕ್ಕೆ ಸೋಂದಾ ಜಾಗೃತ ವೇದಿಕೆ ಮೂಲ ಕಾರಣವಾಗಿದೆ. 2017 ರಿಂದ ಸೋಂದಾ ಗ್ರಾಮ ಪಂಚಾಯತ ಸ್ಥಳೀಯವಾಗಿ ನೇತೃತ್ವ ವಹಿಸಿ ತಾಲೂಕ ಕಂದಾಯ ಇಲಾಖೆಯವರ ಸಹಕಾರದಿಂದ ಈ ಕಾರ್ಯ ಮುನ್ನಡೆಸಿಕೊಂಡು ಬರುತ್ತಿದ್ದಾರೆ.

ಜ್ಯೋತಿ ಹಸ್ತಾಂತರ ಕಾರ್ಯದಲ್ಲಿ ಸೋಂದಾಗ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರ ಹೆಗಡೆ ಉಪಾಧ್ಯಕ್ಷೇ ಭಾರತೀ ಚೆನ್ನಯ್ಯ ಸದಸ್ಯರಾದ ಗಜಾನನ್ ನಾಯಕ್ ಮಂಜುನಾಥ್ ಬಂಡಾರಿ ಮಮತಾ ಜೈನ,ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕ ಚಂದ್ರಕಾಂತಗೌಡ ಗ್ರಾಮ ಆಡಳಿತ ಅಧಿಕಾರಿಗಳಾದ ಕಾವ್ಯ ಕೆ. ಇವರಿಂದ ಜ್ಯೋತಿ ಪಡೆಯಲು ಬೆಳವಡಿ ಗ್ರಾಮ ಪಂಚಾಯತ ಅಧ್ಯಕ್ಷ ಚಂದ್ರಶೇಖರ ಕಾರಿಮನಿ ಸದಸ್ಯರಾದ ಬಸಯ್ಯ ವಿರಕ್ತಮಠ, ಬಿ ಜಿ ದೊಂಗಾವಿ ಉಪಾಧ್ಯಕ್ಷ ಸಂಗೀತಾ ಕನೇಕರ, ರೇಣುಕಾ ಕುರಿ, ಮಂಜುಳಾ ಮಟ್ಟಿ, ಯಲ್ಲಪ್ಪಾ ಬಾರ್ಕಿ, ವಿಶ್ವನಾಥ ಕರಿಕಟ್ಟಿ, ಗಜಾನಂದ ರಾಣೋಜಿ ಇದ್ದರು ವಿಜಯವಾಣಿ ಬೆಳಗಾವಿ ಜಿಲ್ಲಾ ವಿಜಯವಾಣಿ ಪತ್ರಕರ್ತರು, ಹಾಯ್ ಮಲಪ್ರಭಾ ಪತ್ರಿಕೆ ಸಂಪಾದಕ ಯಾಸಿನ್ ಕಿತ್ತೂರು ಮತ್ತು ಬೆಳವಡಿಯ ಭಗತ್ ಸಿಂಗ್ ಗೆಳೆಯರ ಬಳಗದ ಸದಸ್ಯರುಜ್ಯೋತಿಯನ್ನು ಪಡೆದುಕೊಂಡರು. ಮಹಂತರ ಮಠದಿಂದ ಮೆರವಣಿಗೆಯಲ್ಲಿ ಹೊರಟ ಜ್ಯೊತಿ ಸೋದೆ ಶ್ರೀ ವಾದಿರಾಜ ಮಠ, ಸ್ವಾದಿ ಶ್ರೀ ಜೈನಮಠ ಹಾಗೂ ಶ್ರೀಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದಿಂದಲೂ ಪೂಜೆ ಸಲ್ಲಿಸಿ ಗೌರವಾದರಗಳಿಂದ ಬಿಳ್ಕೊಡಲಾಯಿತು.
ಸೋಂದಾಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಲ್ಲಪ್ಪನವರು ಎಲ್ಲರನ್ನ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ಆಭರಮನ್ನಣೆ ಮಾಡಿದರು ಸಂತೋಷ ಹೆಗಡೆ ಸಹಕರಿಸಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!