Tuesday, March 28, 2023

Latest Posts

ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಗದ್ದಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯಸಭೆಯಲ್ಲಿ ಇಂದು ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ ಖರ್ಗೆ ಗುಡುಗಿದ್ದಾರೆ.

ದೇಶದಲ್ಲಿ ದ್ವೇಷ ಹರಡುತ್ತಿರುವವರ ಬಗ್ಗೆ ಪ್ರಧಾನಿಮೋದಿ (Narendra Modi) ಏಕೆ ಮೌನವಾಗಿದ್ದಾರೆ ಎಂದು ಖರ್ಗೆ ಬುಧವಾರ ಪ್ರಶ್ನಿಸಿದ್ದಾರೆ.
ಈ ವೇಳೆ ಪ್ರಧಾನಿ ಅವರನ್ನು ಮೌನಿ ಬಾಬಾ ಎಂದು ಖರ್ಗೆ ಕರೆಡಿದ್ದು, ಈ ವೇಳೆಸಭಾಪತಿ ಜಗದೀಪ್ ಧನ್ಖರ್ ಅವರು, ‘‘ನೀವು ತುಂಬಾ ಹಿರಿಯ ಸದಸ್ಯರು ಸರ್, ಇದು ನಿಮಗೆ ಹಿಡಿಸುವುದಿಲ್ಲ. ಈ ರೀತಿ ಪದಗಳನ್ನು ಬಳಸಬೇಡಿ ಎಂದಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ಈ ಹೇಳಿಕೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿ ಮೇಲ್ಮನೆಯಲ್ಲಿ ಗದ್ದಲವುಂಟಾಗಿದೆ.

2014ರಲ್ಲಿ ಪ್ರಧಾನಿ ಮೋದಿಯವರು ‘ನಾ ಖಾವೂಂಗಾ ನಾ ಖಾನೇ ದೂಂಗಾ’ ಎಂದು ಹೇಳಿದ್ದರು. ಕೆಲವು ಕೈಗಾರಿಕೋದ್ಯಮಿಗಳನ್ನು ತಿನ್ನಲು ಏಕೆ ಬಿಡುತ್ತಿದ್ದಾರೆ ಎಂದು ಈಗ ನಾನು ಕೇಳಬಯಸುತ್ತೇನೆ. ಪ್ರಧಾನಿ ಮೋದಿಯವರ ಆತ್ಮೀಯ ಸ್ನೇಹಿತರೊಬ್ಬರ ಸಂಪತ್ತು 2.5 ವರ್ಷಗಳಲ್ಲಿ 13 ಪಟ್ಟು ಹೆಚ್ಚಾಗಿದೆ. 2014 ರಲ್ಲಿ 2019ರಲ್ಲಿ ₹ 50,000 ಕೋಟಿಯಷ್ಟಿದ್ದರೆ ₹ 1 ಲಕ್ಷ ಕೋಟಿ ಆಯಿತು. ಎರಡು ವರ್ಷಗಳಲ್ಲಿ ಅವರ ಆಸ್ತಿ ₹ 12 ಲಕ್ಷ ಕೋಟಿ ಮುಟ್ಟಿದ್ದು ಯಾವ ಮ್ಯಾಜಿಕ್‌ ಆಗಿತ್ತೋ ಗೊತ್ತಿಲ್ಲ’ ಎಂದಿದ್ದಾರೆ.

ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ, ನೀವು ಸಾಬೀತುಪಡಿಸಲು ಸಾಧ್ಯವಾಗದ ಆರೋಪಗಳನ್ನು ಮಾಡಬಾರದು. ಈ ಸದನವು ಮಾಹಿತಿಯಿಲ್ಲದೆ ವಾಗ್ವಾದಗಳ ವೇದಿಕೆಯಾಗಲು ನಾನು ಅನುಮತಿಸುವುದಿಲ್ಲ ಎಂದುಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸಂಸದ ಪಿಯೂಷ್ ಗೋಯಲ್, ಖರ್ಗೆ ಆರೋಪವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ. ಅವರು ಯಾವುದೇ ಮಾಹಿತಿ ಇಲ್ಲದ ಉದ್ದೇಶಪೂರ್ವಕ ಸಂಪತ್ತಿನ ಬಗ್ಗೆ ಮಾತನಾಡುತ್ತಿದ್ದಾರೆ. ಅದು ಷೇರು ಮಾರುಕಟ್ಟೆ ಲೆಕ್ಕಾಚಾರವಾಗಿದೆ. ಅದರಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ಗೋಯಲ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!