March 26, 2026
Thursday, March 26, 2026
spot_img

RCB ಡೀಲ್ ಬಳಿಕ ಮಲ್ಯ ಭಾವನಾತ್ಮಕ ಟ್ವೀಟ್: ಏನಿದೆ ಅದ್ರಲ್ಲಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್‌ನ ಪ್ರಮುಖ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ ಹೊಸ ಮಾಲೀಕತ್ವಕ್ಕೆ ಒಳಪಟ್ಟಿದೆ. ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ತನ್ನ ಒಡೆತನವನ್ನು ಮಾರಾಟ ಮಾಡಿದ್ದು, ಆದಿತ್ಯ ಬಿರ್ಲಾ ಸಮೂಹ ₹16,706 ಕೋಟಿ ಮೊತ್ತಕ್ಕೆ ಫ್ರಾಂಚೈಸಿಯನ್ನು ಖರೀದಿಸಿದೆ.

ಈ ಡೀಲ್‌ನಲ್ಲಿ ಬೋಲ್ಟ್ ವೆಂಚರ್ಸ್‌, ಬ್ಲ್ಯಾಕ್‌ಸ್ಟೋನ್ ಮತ್ತು ಟೈಮ್ಸ್‌ ಸಮೂಹವೂ ಭಾಗಿಯಾಗಿವೆ. ಈ ಮೂಲಕ ಆದಿತ್ಯ ಬಿರ್ಲಾ ಸಮೂಹವು ಕ್ರಿಕೆಟ್ ಕ್ಷೇತ್ರಕ್ಕೆ ಪ್ರವೇಶಿಸಿದೆ.

ಇದನ್ನೂ ಓದಿ:

ಈ ಬೆಳವಣಿಗೆಯ ನಂತರ ಮಾಜಿ ಮಾಲೀಕ ವಿಜಯ್ ಮಲ್ಯ ಭಾವನಾತ್ಮಕ ಟ್ವೀಟ್ ಮಾಡಿದ್ದು, ಸಾಕಷ್ಟು ಗಮನ ಸೆಳೆದಿದೆ. “ಆರ್‌ಸಿಬಿಯ ಹೊಸ ಮಾಲೀಕರಿಗೆ ಅಭಿನಂದನೆಗಳು. ನಾನು 2008ರಲ್ಲಿ ₹450 ಕೋಟಿ ನೀಡಿ ತಂಡ ಖರೀದಿಸಿದ್ದಾಗ ಹಲವರು ನಕ್ಕರು. ಅದನ್ನು ವ್ಯರ್ಥ ಹೂಡಿಕೆ ಎಂದರು. ಆದರೆ ಇಂದು ಆ ಹೂಡಿಕೆ ಸಾವಿರಾರು ಕೋಟಿ ಮೌಲ್ಯಕ್ಕೆ ಏರಿರುವುದು ಸಂತೋಷ ತಂದಿದೆ” ಎಂದು ಅವರು ತಿಳಿಸಿದ್ದಾರೆ.

ತಮ್ಮ ‘ರಾಯಲ್ ಚಾಲೆಂಜ್’ ಬ್ರ್ಯಾಂಡ್ ಬೆಳೆಸುವ ಉದ್ದೇಶದಿಂದಲೇ ತಂಡಕ್ಕೆ ಆ ಹೆಸರು ನೀಡಿದ್ದೆ ಎಂದು ಮಲ್ಯ ನೆನಪಿಸಿಕೊಂಡಿದ್ದಾರೆ. ಜೊತೆಗೆ, “ಆರ್‌ಸಿಬಿ ಯಾವಾಗಲೂ ನನ್ನ ಡಿಎನ್‌ಎ ಭಾಗವಾಗಿಯೇ ಉಳಿಯುತ್ತದೆ” ಎಂದು ಹೇಳಿದ್ದಾರೆ. ಈ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !