Monday, October 2, 2023

Latest Posts

RECIPE| ಬಾಯಲ್ಲಿ ನೀರೂರಿಸುವ ಮಲೆನಾಡಿನ ಅಪ್ಪೆಹುಳಿ ಹೀಗೆ ಮಾಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯೆಸ್..ಇದು ಒಮ್ಮೆ ಕುಡಿದರೆ ಮತ್ತೊಮ್ಮೆ ಕುಡಿಯುವಂತೆ ಮಾಡುವ ಅದ್ಭುತ ರುಚಿಯ ಒಂದು ಪೇಯ. ಮಲೆನಾಡಿನಲ್ಲಂತೂ ಭಾರೀ ಫೇಮಸ್.‌ ಮಲೆನಾಡಿನಲ್ಲಿ ಹವ್ಯಕರ ಯಾವ ಕಾರ್ಯಕ್ರಮಕ್ಕೆ ಹೋದರೂ ಅಪ್ಪೆಹುಳಿ ಇಲ್ಲದಿಲ್ಲ. ಜೀರ್ಣಕ್ರಿಯೆಯನ್ನು ಚುರುಕುಗೊಳಿಸುವ ಈ ಅಪ್ಪೆಹುಳಿ ಮಲೆನಾಡಿಗರ ಒಂದು ರುಚಿಕರವಾದ ಅಡುಗೆ.

ಬೇಕಾಗುವ ಸಾಮಾಗ್ರಿ:

ಒಂದು ಹುಳಿ ಮಾವಿನಕಾಯಿ, ಹಸಿಮೆಣಸು/ಸೂಜಿಮೆಣಸು, ಉಪ್ಪು, ನೀರು, ಐಸ್‌ ಕ್ಯೂಬ್‌, ಇಂಗು ಒಗ್ಗರಣೆ ಪದಾರ್ಥ

ಮಾಡುವ ವಿಧಾನ:

ಮಾವಿನಕಾಯಿಯ ಸಿಪ್ಪೆ ತೆಗೆದು ಸಣ್ಣೆಗೆ ಹೆಚ್ಚಿಟ್ಟುಕೊಳ್ಳಿ. ಖಾರಕ್ಕೆ ಬೇಕಾದಷ್ಟು ಹಸಿಮೆಣಸು ಅಥವಾ ಸೂಜಿಮೆಣಸನ್ನು ಬಳಸಿ ನುಣ್ಣಗೆ ಮಾವಿನ ತುಂಡುಗಳೊಂದಿಗೆ ರುಬ್ಬಿ. ಸಾಕಷ್ಟು ನೀರು ಸೇರಿಸಿ ತೆಳ್ಳಗೆ ಮಾಡಿ. ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿ. ಐಸ್‌ ಕ್ಯೂಬ್‌ ಹಾಕಿಕೊಳ್ಳಿ. ಸ್ವಲ್ಪ ಜಾಸ್ತಿಯೇ ಇಂಗು ಹಾಕಿ ಕರಿಬೇವಿನ ಒಗ್ಗರಣೆ ನೀಡಿ. ರುಚಿಯಾದ ಅಪ್ಪೆ ಹುಳಿ ರೆಡಿ. ಇದು ಊಟದೊಂದಿಗೂ ಬಳಸಬಹುದು. ಅಥವಾ ನೇರವಾಗಿ ಕುಡಿಯಲು ಉಪಯೋಗಿಸಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!