ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾತಾವರಣದ ಪ್ರಭಾವದಿಂದ ಮೀನು ಹಿಡಿಯಲು ಹೊರಟಿದ್ದ ಮಲ್ಪೆ ಹಡಗು ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರದಲ್ಲಿ ಸಿಲುಕಿಕೊಂಡಿದೆ.
ಬಲವಾದ ಅಲೆಗಳ ಕಾರಣ, ಮಲ್ಪೆ ಮೂಲದ ದೋಣಿ ಫ್ಯಾನ್‌ಗೆ ಮೀನಿನ ಬಲೆ ಸಿಲುಕಿತ್ತು. ಬಲೆಯಲ್ಲಿ ಸಿಲುಕಿ ಮುಳುಗುತ್ತಿದ್ದ ದೋಣಿಯನ್ನು ಮೀನುಗಾರರು ತ್ವರಿತವಾಗಿ ರಕ್ಷಿಸಿ ಬಟ್ಕಳ ಮೂಲದ ಬೋಟ್‌ಗೆ ಹಗ್ಗದಿಂದ ಕಟ್ಟಿ ಎಳೆದೊಯ್ದರು.
ದಡಕ್ಕೆ ಎಳೆಯುವ ಮುನ್ನವೇ ಹಗ್ಗ ತುಂಡಾಗಿದ್ದು, ಸದ್ಯ ಭಟ್ಕಳದ ಹೆಬಳೆ ಪಂಚಾಯತ್‌ನ ತೆಂಗಿನಗುಂಡಿ ವ್ಯಾಪ್ತಿಯ ಸಮುದ್ರ ತೀರದ ಕಲ್ಲಿನ ರಾಶಿಯಲ್ಲಿ ಸದ್ಯ ಬೋಟ್ ಸಿಲುಕಿಕೊಂಡಿದೆ.
ಅಲೆಗಳಿಂದಾಗಿ ಹಡಗನ್ನು ಹೊರತರಲಾರದೇ ಅದನ್ನು ಹಾಗೆಯೇ ಬಿಡಲಾಗಿದೆ.