ನಕಲಿ ಮತದಾರರ ಸೃಷ್ಟಿ ಆರೋಪ ಮಾಡಿದ್ದ ಮಮತಾ ಬ್ಯಾನರ್ಜಿ, ಈ ಬಗ್ಗೆ ಚುನಾವಣಾ ಆಯೋಗ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಜೆಪಿ ತನ್ನ ಪರವಾಗಿ ನಕಲಿ ಮತದಾರರನ್ನು ಸೃಷ್ಟಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮಾಡಿದ ಆರೋಪಕ್ಕೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.

ಎಪಿಕ್‌ ಸಂಖ್ಯೆ ಒಂದೇ ರೀತಿಯಿದ್ದರೂ, ವಿಳಾಸ, ಕ್ಷೇತ್ರ, ಮತಗಟ್ಟೆಗಳಂತಹ ಮಾಹಿತಿಗಳು ಭಿನ್ನವಾಗಿರುತ್ತವೆ. ಹೀಗಿರುವಾಗ, ಮತದಾರರು ತಮಗೆ ನಿಗದಿಪಡಿಸಲಾದಲ್ಲಿಯೇ ಮತದಾನ ಮಾಡಲು ಸಾಧ್ಯ ಎಂದು ಚುನಾವಣಾ ಆಯೋಗ ಹೇಳಿದೆ.

ಮತದಾರರ ಪಟ್ಟಿಯ ಮಾಹಿತಿ ವಿಕೇಂದ್ರಿಕೃತ ವ್ಯವಸ್ಥೆಯಾಗಿದ್ದು, ಜೊತೆಗೆ ಬೇರೆ ಬೇರೆ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳು ಒಂದೇ ಅನುಕ್ರಮದಲ್ಲಿ ಅವುಗಳನ್ನು ಬಳಸುವುದರಿಂದ ಕೆಲ ರಾಜ್ಯಗಳಲ್ಲಿ ಸಾಮ್ಯ ಎಪಿಕ್‌ ಸಂಖ್ಯೆಗಳು ಕಂಡುಬರುತ್ತವೆ ಎಂದು ಸ್ಪಷ್ಟನೆ ನೀಡಿದೆ.

ಬಿಜೆಪಿ ಪರವಾಗಿ ನಕಲಿ ಮತದಾರರನ್ನು ಸೇರಿಸಿಕೊಳ್ಳಲು ಚುನಾವಣಾ ಆಯೋಗದೊಂದಿಗೆ ಸೇರಿ, ಕುತಂತ್ರ ನಡೆಸುತ್ತಿದೆ ಎಂದು ಮಮತಾ ಆರೋಪಿಸಿದ್ದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!