ಮಮತಾ ಬ್ಯಾನರ್ಜಿ ಮನೆ ಭದ್ರತೆಯಲ್ಲಿ ಲೋಪ: 15 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಮನೆಯಲ್ಲಿ ಭದ್ರತಾಲೋಪವಾದ ಹಿನ್ನೆಲೆಯಲ್ಲಿ 15 ಐಪಿಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಮಮತಾ ಬ್ಯಾನರ್ಜಿಯವರ ಗೃಹವು ಮೂರು ಹಂತದ ಭದ್ರತಾ ವ್ಯವಸ್ಥೆಗಳನ್ನು ಒಳಗೊಂಡಿದ್ದು ವ್ಯಕ್ತೊಯೊಬ್ಬ ಅದು ಮಮತಾ ಬ್ಯಾನರ್ಜಿಯವರ ಮನೆ ಎಂದು ತಿಳಿಯದೇ ವಸತಿ ಆವರಣಕ್ಕೆ ಪ್ರವೇಶಿಸಿದ್ದಾನೆ. ಇದಾಗಿ ಮೂರುದಿನಗಳ ನಂತರ ಮಮತಾ ಸರ್ಕಾರವು ಪೊಲೀಸ್‌ ಇಲಾಖೆಗೆ ಸರ್ಜರಿ ನಡೆಸಿದ್ದು ಹಿರಿಯ ಅಧಿಕಾರಿಗಳೂ ಸೇರಿದಂತೆ ಒಟ್ಟೂ 15 ಐಪಿಎಸ್‌ ಅಧಿಕಾರಿಗಳಿಗೆ ವರ್ಗಾವಣೆ ನೀಡಲಾಗಿದೆ.

ಐಪಿಎಸ್ ವಿವೇಕ್ ಸಹಾಯ್ ಅವರನ್ನು ನಿರ್ದೇಶಕ (ಭದ್ರತೆ) ಹುದ್ದೆಯಿಂದ ವರ್ಗಾವಣೆ ಮಾಡಲಾಗಿದೆ ಮತ್ತು ಆದೇಶದ ಪ್ರಕಾರ ರಾಜ್ಯ ಡಿಜಿಪಿ (ನಿಬಂಧನೆ) ಎಂದು ಹೆಸರಿಸಲಾಗಿದೆ. ಐಪಿಎಸ್ ಪಿಯೂಷ್ ಪಾಂಡೆ ಅವರನ್ನು ಭದ್ರತಾ ವಿಭಾಗದ ನೂತನ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಪಾಂಡೆ ಅವರು ಈ ಹಿಂದೆ ಎಡಿಜಿ ತಿದ್ದುಪಡಿ ಸೇವೆಗಳ ಉಸ್ತುವಾರಿ ವಹಿಸಿದ್ದರು. ಮುಖ್ಯಮಂತ್ರಿ ಕಚೇರಿಯ ಒಎಸ್‌ಡಿ ಶಂಖ ಶುಭ್ರ ಚಕ್ರಬರ್ತಿ ಅವರನ್ನು ಕೋಲ್ಕತ್ತಾ ಪೊಲೀಸ್‌ನ ಜಂಟಿ ಸಿಪಿಯನ್ನಾಗಿ ಮಾಡಲಾಗಿದೆ.

ಬ್ಯಾರಕ್‌ಪೋರ್ ಸಿಟಿ ಪೊಲೀಸ್ ಕಮಿಷನರ್ ಮನೋಜ್ ಕುಮಾರ್ ವರ್ಮಾ ಅವರನ್ನು ಹೆಚ್ಚುವರಿ ನಿರ್ದೇಶಕರಾಗಿ (ಭದ್ರತೆ) ಐಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಹೆಚ್ಚುವರಿ ಉಸ್ತುವಾರಿಯನ್ನಾಗಿ ಮಾಡಲಾಗಿದೆ. ಬ್ಯಾರಕ್‌ಪುರ ಪೊಲೀಸ್‌ನ ಜಂಟಿ ಸಿಪಿ ಅಜಯ್ ಕುಮಾರ್ ಠಾಕೂರ್ ಅವರನ್ನು ಹೊಸ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!