ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಬೆಂಗಾವಲು ವಾಹನವನ್ನು ರಸ್ತೆಬದಿಯಲ್ಲಿ ನಿಲ್ಲಿಸಿ ಅಲ್ಲಿಯೇ ಇದ್ದ ಸಣ್ಣ ಹೋಟೆಲ್ ತೆರಳಿ ಪಕೋಡಾ ಹಂಚಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮಮತಾ ಬ್ಯಾನರ್ಜಿ ಈ ಹಿಂದೆ ಹಲವು ಬಾರಿ ಇಂತಹ ಕೆಲಸಗಳನ್ನು ಮಾಡಿದ್ದಾರೆ.
ಮಮತಾ ಬ್ಯಾನರ್ಜಿ ಬೆಂಗಾವಲು ಪಡೆಯಲ್ಲಿ ಜಡ್ಗಮ್ ಮೂಲಕ ಹಾದು ಹೋಗುತ್ತಿದ್ದರು. ಈ ವೇಳೆ ರಸ್ತೆಯ ಬದಿಯಲ್ಲಿ ಒಂದು ಸಣ್ಣ ಹೋಟೆಲ್ ಅನ್ನು ಕಂಡು ಕೂಡಲೇ ತನ್ನ ಬೆಂಗಾವಲು ಪಡೆಯನ್ನು ನಿಲ್ಲಿಸಲು ಹೇಳಿ, ನೇರವಾಗಿ ಹೋಟೆಲ್ಗೆ ತೆರಳಿ ಅಲ್ಲಿನ ಗ್ರಾಹಕರಿಗೆ ಪಕೋಡಾ ಹಂಚಿದರು. ಬಳಿಕ ಎಲ್ಲರಿಗೂ ಸಿಕ್ಕಿದೆಯಾ ಎಂದು ಕೇಳಿದರು.
#WATCH | West Bengal CM Mamata Banerjee stopped her convoy at a roadside tea stall and started serving pakoda to the people, in Jhargram. pic.twitter.com/2b3NKhXj5q
— ANI (@ANI) November 15, 2022
ಮಮತಾ ಬ್ಯಾನರ್ಜಿ ಅವರು ಜಡ್ಗಾಮ್ನಲ್ಲಿ ಆದಿವಾಸಿಗಳಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಕೆಲವು ತಿಂಗಳ ಹಿಂದೆ ಮಮತಾ ಬ್ಯಾನರ್ಜಿ ರಸ್ತೆ ಬದಿಯ ಸ್ಟಾಲ್ಗೆ ಹೋಗಿ ಮೊಮೊಸ್, ಪಾನಿಪುರಿ ತಯಾರಿಸಿದ್ದರು. ಆ ಸಮಯದಲ್ಲಿ ಆ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿದ್ದವು.