ಬಾಲಿವುಡ್‌ ಸ್ಟಾರ್‌ ನಟನ ಸೀಕ್ರೆಟ್ ಬಿಚ್ಚಿಟ್ಟ ಮಮತಾ ಕುಲಕರ್ಣಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಮಹಾಕುಂಭದ ಮೇಳದಲ್ಲಿ ಸನ್ಯಾಸತ್ವ ಸ್ವೀಕರಿಸಿ ಬಳಿಕ ಉಚ್ಚಾಟನೆಗೊಂಡು ಸುದ್ದಿಯಲ್ಲಿರುವ ಬಾಲಿವುಡ್‌ನ ಮಾಜಿ ನಟಿ ಮಮತಾ ಕುಲಕರ್ಣಿ ಇದೀಗ ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾಗ ನಡೆದ ಕೆಲ ಘಟನೆಗಳ ಕುರಿತು ಮಾತನಾಡಿದ್ದಾರೆ.

ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ಮಮತಾ ಕುಲಕರ್ಣಿ , ಬಾಲಿವುಡ್‌ ನಟ ಬಾಬಿ ಡಿಯೋಲ್ ಮಮತಾ ಅವರನ್ನ ‘ಒನ್ ನೈಟ್ ಸ್ಟ್ಯಾಂಡ್​ಗೆ’ ಕೇಳಿದ್ರಂತೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದೆ.

ಮಮತಾ ಕುಲಕರ್ಣಿ ಅವರು ಶಾರುಖ್ ಖಾನ್, ಸಲ್ಮಾನ್ ಖಾನ್ ಜೊತೆಗೂ ನಟಿಸಿದ್ದಾರೆ. ಬಾಲಿವುಡ್‌ನಲ್ಲಿ ಉತ್ತುಂಗದಲ್ಲಿದ್ದಾಗ ನಟ ಬಾಬಿ ಡಿಯೋಲ್ ಅವರು ಮಮತಾರನ್ನ ಒನ್ ನೈಟ್ ಸ್ಟ್ಯಾಂಡ್​ಗೆ ಕೇಳಿದ್ದರಂತೆ.

ಬಾಬಿ ‘ಬರ್ಸಾತ್’ ಸಿನಿಮಾದ ಶೂಟಿಂಗ್‌ನಲ್ಲಿದ್ದಾಗ ತಾವು ಮತ್ತೊಂದು ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದೆ. ನಟ ಮಿಥುನ್ ಚಕ್ರವರ್ತಿ ಹೋಟೆಲ್‌ನಲ್ಲಿ ಇಬ್ಬರ ನಡುವೆ ಸಭೆ ಏರ್ಪಡಿಸಿದ್ದರು. ಮೊದಲ ಭೇಟಿಯಲ್ಲೇ ಮಮತಾ ಜೊತೆ ನಟ ಬಾಬಿ ಡಿಯೋಲ್‌ಗೆ ಸ್ನೇಹವಾಗಿತ್ತು. ಸ್ನೇಹಿತರಾದ ಬಳಿಕ ಬಾಬಿ ಮಮತಾರನ್ನ ಒನ್ ನೈಟ್ ಸ್ಟ್ಯಾಂಡ್ ಕೇಳಿದ್ದರು. ಈ ವೇಳೆ ಬಾಬಿ ಡಿಯೋಲ್​ಗೆ ಮಮತಾ ಕುಲಕರ್ಣಿ ಒಂದು ಷರತ್ತನ್ನು ಹಾಕಿದ್ದರು ಅಂತೆ .

ಆ ಸಮಯದಲ್ಲಿ ನಟ ಬಾಬಿ ಡಿಯೋನ್ ನಟಿ ಪೂಜಾ ಭಟ್ ಜೊತೆ ಡೇಟಿಂಗ್ ನಡೆಸ್ತಿದ್ದರು. ನಿಮ್ಮ ಗೆಳತಿ ಅನುಮತಿ ಪಡೆದ್ರೆ ನಾನು ಯೋಚಿಸ್ತೇನೆ ಎಂದು ಮಮತಾ ಕುಲಕರ್ಣಿ ಹೇಳಿದ್ದರು ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಮಮತಾ ಬಹಿರಂಗಪಡಿಸಿದ್ದಾರೆ.

ಇದೇ ಸಂದರ್ಶನದಲ್ಲಿ ಮಮತಾ ಅವರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಹಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಸದ್ಯ ಎಲ್ಲೆಡೆ ಮಮತಾ ಕುಲಕರ್ಣಿ ಮಾತ್ರ ಚರ್ಚೆಯಾಗುತ್ತಿದೆ.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!