ಸಲಿಂಗ ಸಂಬಂಧ ಬಹಿರಂಗಪಡಿಸಿದ್ದಕ್ಕಾಗಿ ವ್ಯಕ್ತಿ ಕೊಲೆ, ಮೂವರ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೂವರು ವ್ಯಕ್ತಿಗಳು ಹೊಂದಿದ್ದ ಅಸ್ವಾಭಾವಿಕ ಲೈಂಗಿಕತೆ ವಿಚಾರವನ್ನು ಇತರರಿಗೆ ಬಹಿರಂಗಪಡಿಸಿದ ಸಿಟ್ಟಿಗೆ 63 ವರ್ಷದ ವ್ಯಕ್ತಿಯನ್ನು ಕೊಂದುಹಾಕಿದ ಘಟನೆ ಮಧ್ಯಪ್ರದೇಶದ ಜಬಲ್‌ಪುರದಲ್ಲಿ ನಡೆದಿದೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 9 ರಂದು ಜಮೀನೊಂದರಲ್ಲಿ ವ್ಯಕ್ತಿಯ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ವೃದ್ಧ ಉಸಿರುಗಟ್ಟಿ ಸಾವನ್ನಪ್ಪಿದ್ದು ತಿಳಿದುಬಂದಿತ್ತು. ಬಳಿಕ ನಡೆಸಿದ ತನಿಖೆಯು ಮೂವರ ಬಂಧನಕ್ಕೆ ಕಾರಣವಾಗಿದೆ. ಆರೋಪಿಗಳಲ್ಲಿ ಒಬ್ಬಾತ 42 ವರ್ಷ ವಯಸ್ಸಿನವನಾದರೆ ಮತ್ತಿಬ್ಬರು 25 ವರ್ಷದೊಳಗಿನವರು.
ಘಟನೆ ನಡೆದ ಸ್ಥಳದಲ್ಲಿ ಪೊಲೀಸರು ಸೆಕ್ಸ್ ಸ್ಪ್ರೇ, ಮಾತ್ರೆಗಳು ಮತ್ತು ಎಣ್ಣೆ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಕೊಲೆ ನಡೆಸುವ ಉದ್ದೇಶಕ್ಕೆ ಇರಿಸಲಾಗಿದ್ದ ರಾಡ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್ಪಿ) ಸಂಜಯ್ ಅಗರವಾಲ್ ಹೇಳಿದ್ದಾರೆ.
“ಮೂವರು ಆರೋಪಿಗಳು ಸಲಿಂಗಿ ಲೈಂಗಿಕಸಂಬಂಧ ಹೊಂದಿದ್ದರು. ಈ ಬಗ್ಗೆ ವೃದ್ಧ ವ್ಯಕ್ತಿ ಊರಿನ ಇತರ ವ್ಯಕ್ತಿಗಳಿಗೆ ಹೇಳಿಕೊಂಡು ಬಂದಿದ್ದ. ಇದರಿಂದ ಅಸಮಾಧಾನಗೊಂಡ ಅವರು ಅವನನ್ನು ಕೊಂದರು” ಎಂದು ಎಎಸ್ಪಿ ಹೇಳಿದ್ದಾರೆ. ಆರೋಪಿಗಳ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!