ಹೊಸದಿಗಂತ ವರದಿ ಹಾವೇರಿ
ಜಿಲ್ಲೆ ಸವಣೂರು ತಾಲೂಕಿನ ತಗ್ಗಿಹಳ್ಳಿ ಗ್ರಾಮದಲ್ಲಿ ಶ್ರೀರಾಮನ ಕುರಿತು ಅವಹೇಳನಕಾರಿ ವ್ಯಾಟ್ಸ್ ಆಪ್ ಪೋಸ್ಟ್ ಮಾಡಿ ಹಿನ್ನೆಲೆಯಲ್ಲಿ ಪೊಲೀಸರು ಮುಸ್ಲಿಂ ವ್ಯಕ್ತಿಯೋರ್ವನ ಬಂಧಿಸಿದ್ದಾರೆ.
ಬಂಧಿತನನ್ನು ಖಲಂದರ ಕಣವಿ ಎಂದು ಗುರುತಿಸಲಾಗಿದ್ದು, ವಾಟ್ಸಾಪ್ ಪೋಸ್ಟ್ ಹಿನ್ನೆಲೆಯಲ್ಲಿ ಅವನ ವಿರುದ್ಧ ಪಿಸೊ ಮಹೇಶ್ ಕೇಲೂರು ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ದೂರು ದಾಖಲಾಗಿ, ಅವನನ್ನು ವಶಕ್ಕೆ ಪಡೆಯಲಾಗಿದೆ.
ಸ್ಟೇಟಸ್ ಮೂಲಕ ದ್ವೇಷ ವೈಷಮ್ಯ ಉಂಟು ಮಾಡುವ ವಿಡಿಯೋ ಇಟ್ಟಿದ್ದ ಎನ್ನಲಾಗಿದೆ. ಪಾಕಿಸ್ತಾನ ಧ್ವಜದ ಚಿತ್ರವಿಟ್ಟು, ಹಮ್ ಬಾಪ್ ಹೈ ತುಮಾರೆ ಎಂದು ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ ಯುವಕನನ್ನು ಸವಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದಿದ್ದಾರೆ.