ಅತಿಯಾದ ಮದ್ಯ ಸೇವನೆ: RCB ಆಟಗಾರನಿಗೆ ಅನಾರೋಗ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾದ ಕ್ರಿಕೆಟಿಗ ಮತ್ತು ಆರ್‌ಸಿಬಿ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಕಳೆದ ವಾರ ಅಡಿಲೇಡ್‌ನಲ್ಲಿ ನೈಟ್‌ಔಟ್‌ನಲ್ಲಿ ಪಾಲ್ಗೊಂಡಿದ್ದಾಗ ಕ್ರಿಕೆಟಿಗ ಕುಸಿದು ಬಿದ್ದಿದ್ದರು. ಇದೀಗ ಕ್ರಿಕೆಟಿಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದು, ಈ ಬಗ್ಗೆ ಗಂಭೀರ ತನಿಖೆ ನಡೆಸಲು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ನಿರ್ಧರಿಸಿದೆ.

ಮ್ಯಾಕ್ಸ್‌ವೆಲ್ ‘‘ಸಿಕ್ಸ್​​ ಆ್ಯಂಡ್​​ ಔಟ್​’’ ಬ್ಯಾಂಡ್​​ನ ಸಂಗೀತಗೋಷ್ಠಿಯಲ್ಲಿ ಹಾಜರಾಗಿದ್ದರು. ಇದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ಅವರ ಕಾರ್ಯಕ್ರಮವಾಗಿತ್ತು. ಅದರಂತೆ ಇದರಲ್ಲಿ ಭಾಗವಹಿಸಿದ್ದ ಮ್ಯಾಕ್ಸ್ ವೆಲ್ ಮಿತಿಮೀರಿ ಮದ್ಯ ಸೇವಿಸಿದ್ದರು. ಈ ಕಾರಣಕ್ಕಾಗಿ, ಅವರು ಅಸ್ವಸ್ಥರಾಗಿದ್ದರು ಮತ್ತು ತಕ್ಷಣ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ವರದಿಯಾಗಿದೆ.

ಆಸ್ಪತ್ರೆಗೆ ದಾಖಲಾಗಿದ್ದ ಮ್ಯಾಕ್ಸ್ ವೆಲ್ ಮರುದಿನ ಡಿಸ್ಚಾರ್ಜ್ ಆಗಿದ್ದರು. ಮ್ಯಾಕ್ಸ್‌ವೆಲ್ ಕಾಯಿಲೆಯನ್ನು ಪ್ರಸ್ತುತ ಸಿಎ ಗಂಭೀರವಾಗಿ ತನಿಖೆ ನಡೆಸುತ್ತಿದೆ. ಮ್ಯಾಕ್ಸ್‌ವೆಲ್ ತಪ್ಪಿತಸ್ಥರೆಂದು ಕಂಡುಬಂದರೆ, ಅವರು ಅನರ್ಹತೆಯನ್ನು ಎದುರಿಸಬೇಕಾಗುತ್ತದೆ. ಇನ್ನೊಂದೆಡೆ ಮುಂಬರುವ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಬೇಕಿದೆ.

ನಾವೆಲ್ಲರೂ ವಯಸ್ಕರು, ರಾತ್ರಿ ವಿಹಾರಗಳಲ್ಲಿ ಭಾಗವಾಗಿಸುತ್ತೇವೆ. ನೀವು ನಿಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಈ ನೈಜ ಘಟನೆಯಲ್ಲಿ ಅವರು ಆಸ್ಟ್ರೇಲಿಯನ್ನರೊಂದಿಗೆ ಪ್ರವಾಸದಲ್ಲಿ ಇರಲಿಲ್ಲ ಎಂದು ನಾನು ಭಾವಿಸುತ್ತೇನೆ. ಖಾಸಗಿ ಕಾರ್ಯಕ್ರಮವೊಂದಕ್ಕೆ ಅಲ್ಲಿಗೆ ಬಂದಿದ್ದರು. ಅವರು ಕ್ರಿಕೆಟ್ ತಂಡದಲ್ಲಿ ಇರಲಿಲ್ಲ. ಆದ್ದರಿಂದ ಇದು ಸ್ವಲ್ಪ ವಿಭಿನ್ನವಾಗಿದೆ. “ನಿಸ್ಸಂಶಯವಾಗಿ, ನೀವು ಯಾವುದೇ ನಿರ್ಧಾರ ತೆಗೆದುಕೊಂಡರೂ, ನೀವು ಅದರಲ್ಲಿ ಸಂತೋಷವಾಗಿರಬೇಕು” ಎಂದು ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಪ್ರತಿಕ್ರಿಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!