Friday, March 24, 2023

Latest Posts

VIRAL VIDEO| ಅಪ್ಪನ ಜೀವ ಉಳಿಸಿದ ಮಗಳು! ಆಕೆ ಮಾಡಿದ ತ್ಯಾಗ ನೆನೆದು ತಂದೆ ಕಣ್ಣೀರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಗಳಿಗೆ ತಂದೆಯೇ ತನ್ನ ಜೀವನದ ಹೀರೋ. ಅಂತಹ ತಂದೆಗೆ ಮಗಳು ಏನೇ ಮಾಡಿದರೂ ಕಡಿಮೆ. ಆದರೆ, ತಂದೆ ಮಗಳಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ಘಟನೆಯ ವಿಡಿಯೋ ವೈರಲ್ ಆಗಿದ್ದು, ತಂದೆ ಮಗಳ ಬಾಂಧವ್ಯ ಎಷ್ಟು ಮಧುರವಾಗಿದೆ ಎಂಬುದಕ್ಕೆ ಜೀವಂತ ಸಾಕ್ಷಿ.

ತಂದೆಯ ಕಿಡ್ನಿ ಸಂಪೂರ್ಣವಾಗಿ ವಿಫಲವಾಗಿ ಆತನಿಗೆ ಮೂತ್ರಪಿಂಡ ಕಸಿ ಮಾಡಬೇಕಾಗಿದೆ. ಅದಕ್ಕಾಗಿ ವೈದ್ಯರು ಎಲ್ಲಾ ವ್ಯವಸ್ಥೆಗಳನ್ನು ಪೂರ್ಣಗೊಳಿಸಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಆದರೆ, ಕಿಡ್ನಿ ದಾನ ಮಾಡಿದವರು ಯಾರು ಎಂದು ವೈದ್ಯರು ಹೇಳಿಲ್ಲ. ಶಸ್ತ್ರಚಿಕಿತ್ಸೆಯ ನಂತರ ಅವರ ಮಗಳನ್ನು ಅವರ ಬಳಿಗೆ ಕರೆತರಲಾಗುತ್ತದೆ.

ಕಿಡ್ನಿ ದಾನ ಮಾಡಿದವರು ತಮ್ಮ ಮಗಳೆಂದು ತಿಳಿದು ತಂದೆ ಕಣ್ಣೀರು ಹಾಕಿದ್ದಾರೆ. ಆ ವೇಳೆ ತೆಗೆದ ವಿಡಿಯೋ ವೈರಲ್ ಆಗಿದೆ. ಇಂತಹ ಮಗಳನ್ನು ಪಡೆದ ತಂದೆ ಅದೃಷ್ಟವಂತರು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!