ಹೊಸದಿಗಂತ ವರದಿ ಹಾಸನ :
ಸಾಲ ನೀಡಿದವರ ಕಿರುಕುಳ ಹಾಗೂ ಕ್ರಿಕೆಟ್ ಬೆಟ್ಟಿಂಗ್‌ಗೆ ಹಣ ಕಟ್ಟಿಸಿಕೊಂಡು ಮೋಸ ಮಾಡಿದ ಎಂಬ ಆರೋಪಕ್ಕೆ ಮನನೊಂದು ವಿಷ ಸೇವಿಸಿ ಅವಿವಾಹಿತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಅಟ್ಟಾವರ ಗ್ರಾಮದಲ್ಲಿ ಘಟನೆ ನಡೆದಿದೆ.
ಸ್ವರೂಪ್ (40) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕೆಲ ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ಸ್ವರೂಪ್ ಅಂದಿನಿಂದ ಮನೆಯಲ್ಲೇ ಇದ್ದರು. ಚಿಕಿತ್ಸೆಗಾಗಿ ಮಾಡಿಕೊಂಡಿದ್ದ
ಸಾಲ ಮರು ಪಾವತಿಸುವಂತೆ ಹಣ ನೀಡಿದವರ
ಒತ್ತಾಯ ಹಾಗು ಅಪಘಾತದಲ್ಲಿ ಬಂದಿದ್ದ ಹಣವನ್ನು ಕ್ರಿಕೆಟ್ ಬೆಟ್ಟಿಂಗ್‌ಗೆಂದು ಅನ್ಸಾರ್, ತಿಪ್ಪೇಸ್ವಾಮಿ, ಬಾಳಪ್ಪ ಎಂಬುವವರಿಗೆ ಸ್ವರೂಪ್ ನೀಡಿದ್ದಾರೆ ಎನ್ನಲಾಗಿದೆ.
ಹಣ ನೀಡದೆ ಮೋಸ ಮಾಡಿದ ಆರೋಪ ಹಾಗೂ ಸಾಲ ನೀಡಿದವರ ಕಿರುಕುಳ ಆರೋಪಕ್ಕೆ ಮನನೊಂದ ಸ್ವರೂಪ್ ಮನೆಯ ಬಾತ್ ರೂಂನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ದುದ್ದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.