ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾನು ಕೆಲಸ ಮಾಡುತ್ತಿದ್ದ ಕಂಪನಿಯ ವೆಬ್‌ಸೈಟ್‌ನಲ್ಲಿ ಡೆತ್ ನೋಟ್ ಅನ್ನು ಅಪ್‌ಲೋಡ್ ಮಾಡಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮುಂಬೈ ನ ಸಹಾರಾ ಹೋಟೆಲ್‌ನ ಕೋಣೆಯಲ್ಲಿ ತನ್ನ ಪತ್ನಿ ಮತ್ತು ಆಕೆಯ ಚಿಕ್ಕಮ್ಮನನ್ನು ದೂಷಿಸಿ ಡೆತ್ ನೋಟ್ ಬರೆದಿಟ್ಟು 41 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿಶಾಂತ್ ತ್ರಿಪಾಠಿ ಕಳೆದ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೂರು ದಿನಗಳ ಹಿಂದೆ ಹೋಟೆಲ್‌ಗೆ ಭೇಟಿ ನೀಡಿ, ಅತಿಥಿಗಳು ಗೌಪ್ಯತೆಗಾಗಿ ಬಳಸುವ ‘ಡೋಂಟ್ ಡಿಸ್ಟರ್ಬ್’ ಫಲಕವನ್ನು ಹಾಕಿದ್ದ. ಆದರೆ, ದೀರ್ಘಕಾಲದವರೆಗೆ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಹೋಟೆಲ್ ಸಿಬ್ಬಂದಿ ಮಾಸ್ಟರ್ ಕೀ ಬಳಸಿ ಕೋಣೆಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ.
ಮಹಿಳಾ ಹಕ್ಕುಗಳ ಕಾರ್ಯಕರ್ತೆಯಾಗಿರುವ ಸಂತ್ರಸ್ತನ ತಾಯಿ ನೀಲಂ ಚತುರ್ವೇದಿ ನೀಡಿದ ದೂರಿನ ಆಧಾರದ ಮೇಲೆ, ಪತ್ನಿ ಅಪೂರ್ವ ಪಾರಿಖ್ ಮತ್ತು ಆಕೆಯ ಚಿಕ್ಕಮ್ಮ ಪ್ರಾರ್ಥನಾ ಮಿಶ್ರಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತನ್ನ ಕಂಪನಿಯ ವೆಬ್‌ಸೈಟ್‌ನಲ್ಲಿ ಪಾಸ್‌ವರ್ಡ್‌ನೊಂದಿಗೆ ಸುರಕ್ಷಿತಗೊಳಿಸಲಾದ ಡೆತ್ ನೋಟ್‌ನಲ್ಲಿ, ತನ್ನ ಹೆಂಡತಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ ಮತ್ತು ತನ್ನ ಸಾವಿಗೆ ಅವಳು ಮತ್ತು ಆಕೆಯ ಚಿಕ್ಕಮ್ಮ ಕಾರಣ ಎಂದು ಹೇಳಿದ್ದಾನೆ.
ಡೆತ್ ನೋಟ್ ನಲ್ಲಿ ಏನಿದೆ?
‘ನೀನು ಇದನ್ನು ಓದುವ ಹೊತ್ತಿಗೆ ನಾನು ಹೋಗಿರುತ್ತೇನೆ. ನನ್ನ ಕೊನೆಯ ಕ್ಷಣಗಳಲ್ಲಿ, ನಡೆದ ಎಲ್ಲದಕ್ಕೂ ನಿನ್ನನ್ನು ದ್ವೇಷಿಸಬಹುದಿತ್ತು. ಆದರೆ, ನಾನು ಹಾಗೆ ಮಾಡುವುದಿಲ್ಲ. ಈ ಕ್ಷಣದಲ್ಲಿ ನಾನು ಪ್ರೀತಿಯನ್ನು ಆರಿಸಿಕೊಳ್ಳುತ್ತೇನೆ. ಆಗಲೂ ನಾನು ನಿನ್ನನ್ನು ಪ್ರೀತಿಸುತ್ತಿದ್ದೆ. ಈಗಲೂ ನಾನು ನಿನ್ನನ್ನು ಪ್ರೀತಿಸುತ್ತೇನೆ. ನಾನು ಭರವಸೆ ನೀಡಿದ್ದಂತೆ, ಅದು ಎಂದಿಗೂ ಮಾಸುವುದಿಲ್ಲ’.
‘ನಾನು ಎದುರಿಸಿದ ಇತರ ಎಲ್ಲ ಸಮಸ್ಯೆಗಳು ಮತ್ತು ನೀನು ಮತ್ತು ಪ್ರಾರ್ಥನಾ ಮೌಸಿ ನನ್ನ ಸಾವಿಗೆ ಕಾರಣ ಎಂಬುದು ನನ್ನ ತಾಯಿಗೆ ತಿಳಿದಿದೆ. ಆದ್ದರಿಂದ ಈಗ ಆಕೆಯನ್ನು (ತಾಯಿಯನ್ನು) ಸಂಪರ್ಕಿಸಬೇಡಿ ಎಂದು ನಾನು ಬೇಡಿಕೊಳ್ಳುತ್ತೇನೆ. ಏಕೆಂದರೆ ಆಕೆ ಸಾಕಷ್ಟು ನೊಂದಿದ್ದಾಳೆ. ಆಕೆ ಶಾಂತಿಯಿಂದ ದುಃಖಿಸಲಿ’ ಎಂದು ಹೇಳಿದ್ದಾರೆ.