October 11, 2026
Sunday, October 11, 2026
spot_img

ಜೈಲು ಶಿಕ್ಷೆ ಅನುಭವಿಸಿದ್ರೂ ಬುದ್ದಿ ಬಂದಿಲ್ಲ: ಮಹಿಳೆಯ ಹ*ತ್ಯೆ ಮಾಡಿ ರೈಲಿನ ಮುಂದೆ ಹಾರಿ ವ್ಯಕ್ತಿಯ ಆತ್ಮಹ*ತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಶಾಕಿಂಗ್ ಘಟನೆಯೊಂದು ಬೆಳಕಿಗೆ ಬಂದಿದೆ. ಸಂಬಂಧಿಕನಾಗಿದ್ದ ವ್ಯಕ್ತಿಯೊಬ್ಬ ಮಹಿಳೆಯನ್ನು ಕೊಂದು ಬಳಿಕ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತ ಮಹಿಳೆಯನ್ನು 50 ವರ್ಷದ ದುರ್ಗಾ ಎಂದು ಗುರುತಿಸಲಾಗಿದ್ದು, ಈ ಕೃತ್ಯ ಎಸಗಿದ ವ್ಯಕ್ತಿಯನ್ನು ಪ್ರೀತಮ್ ಕುಶ್ವಾಹ ಎಂದು ಗುರುತಿಸಲಾಗಿದೆ.

ಕುಶ್ವಾಹ ಹಿಂದೆ ತನ್ನ ಮೂವರು ಮಕ್ಕಳನ್ನು ಕೊಂದ ಪ್ರಕರಣದಲ್ಲಿ 18 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದನು. ಬಿಡುಗಡೆಗೊಂಡ ಬಳಿಕ ಕಳೆದ ಒಂದು ವರ್ಷದಿಂದ ದುರ್ಗಾ ಅವರ ಮನೆಯಲ್ಲಿ ವಾಸಿಸುತ್ತಿದ್ದನು. ಗೌತಮ್ ನಗರದಲ್ಲಿರುವ ನಿರ್ಮಾಣ ಹಂತದ ಮನೆಯನ್ನು ಸ್ವಚ್ಛಗೊಳಿಸುವ ನೆಪದಲ್ಲಿ ಮಹಿಳೆಯನ್ನು ಅಲ್ಲಿ ಕರೆದೊಯ್ದು, ನಂತರ ಹರಿತವಾದ ಆಯುಧದಿಂದ ಪದೇಪದೇ ಇರಿದು ಕೊಲೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಇದನ್ನೂ ಓದಿ:

ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಕಳೆದ ಕೆಲವು ತಿಂಗಳಿಂದ ಮನೆ ಖಾಲಿ ಮಾಡಲು ಹೇಳುತ್ತಿದ್ದ ವಿಚಾರವೇ ಇಬ್ಬರ ನಡುವೆ ಉದ್ವಿಗ್ನತೆಯ ಕಾರಣವಾಗಿತ್ತು. ಇದರಿಂದ ಆಕ್ರೋಶಗೊಂಡ ಕುಶ್ವಾಹ ಈ ಕೃತ್ಯಕ್ಕೆ ಮುಂದಾಗಿದ್ದಾನೆ ಎಂದು ಶಂಕಿಸಲಾಗಿದೆ.

ಕೊಲೆ ಮಾಡಿದ ಬಳಿಕ ಆತ ಸ್ಥಳದಿಂದ ಪರಾರಿಯಾಗಿ, ನಂತರ ನಿಶಾತ್‌ಪುರ ಪ್ರದೇಶದ ಬಳಿ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಮುಂದುವರೆಸಿದ್ದಾರೆ.

Must Read