ಹೊಸದಿಗಂತ ಡಿಜಿಟಲ್ ಡೆಸ್ಕ್:
ಖಿನ್ನತೆಗೆ ಒಳಗಾಗಿ ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಮಾರತಹಳ್ಳಿಯ ಮಂಜುನಾಥ್ ಲೇಔಟ್ ನಲ್ಲಿ ನಡೆದಿದೆ.
ಉತ್ತರ ಪ್ರದೇಶ ಮೂಲದ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಅಚ್ಚರಿ ಅಂದ್ರೆ, ಅತುಲ್ ಸುಭಾಷ್, ನ್ಯಾಯ ಸಿಗುವುದು ಇನ್ನೂ ಬಾಕಿ ಇದೆ JUSTICE IS DUE ಎಂದು ಬೋರ್ಡ್ ತನ್ನ ಕುತ್ತಿಗೆ ಹಾಕಿಕೊಂಡು ನೇಣಿಗೆ ಶರಣಾಗಿದ್ದಾನೆ.
ಅಲ್ಲದೇ 40ಕ್ಕೂ ಹೆಚ್ಚು ಪೇಜ್ ಗಳ ಡೆತ್ ನೋಟ್ ಬರೆದಿಟ್ಟಿದ್ದಾರೆ. ಆ ಡೆತ್ನೋಟ್ಗಳನ್ನು ಮಧ್ಯರಾತ್ರಿ NGO ವಾಟ್ಸಾಪ್ ಗ್ರೂಪ್ಗೆ ಶೇರ್ ಮಾಡಿ ಸಾಧ್ಯವಾದ್ರೆ ನನ್ನ ಕುಟುಂಬಕ್ಕೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾನೆ.
ಉತ್ತರ ಪ್ರದೇಶ ಮೂಲದ ಅತುಲ್ ಸುಭಾಶ್ ಮಾರತಹಳ್ಳಿಯ ಲೇಔಟ್‌ನಲ್ಲಿ ವಾಸವಿದ್ದರು. ಈತನಿಗೆ ಮದುವೆಯಾಗಿದ್ದು, ಅತುಲ್ ಮೇಲೆ ಪತ್ನಿ ಉತ್ತರ ಪ್ರದೇಶದಲ್ಲಿ ಕೇಸ್ ಹಾಕಿದ್ದಳು. ಕೌಟುಂಬಿಕ ಕಲಹದಿಂದ ನೊಂದಿದ್ದ ಪತಿ ಸಾಯುವ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಹೆಂಡತಿ ಸುಳ್ಳು ಕೇಸ್ ಹಾಕಿದ್ರೆ ಹೋರಾಟ ಮಾಡುವ Save Indian family foundation ಎನ್ನುವ NGO ಕೂಡ ಸೇರಿದ್ದ. ಹೀಗಾಗಿ NGOದ ವಾಟ್ಸ್‌ಆ್ಯಪ್ ಗ್ರೂಪ್ಗೆ ಡೆತ್ ನೋಟ್ ಕಳಿಸಿದ್ದಾನೆ. ಅದರಲ್ಲಿ ಸಾಧ್ಯವಾದ್ರೆ ನನ್ನ ಕುಟುಂಬಕ್ಕೆ ಸಹಾಯ ಮಾಡಿ ಎಂದು ಮೆಸೇಜ್ ಮಾಡಿದ್ದಾನೆ.