ಹೊಸದಿಗಂತ ವರದಿ ಶಿವಮೊಗ್ಗ :
ಆನೆ ದಾಳಿಗೆ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಭದ್ರಾವತಿ ತಾಲ್ಲೂಕಿನ ಬಂಡೀಗುಡ್ಡದಲ್ಲಿ ಗುರುವಾರ ರಾತ್ರಿ ನಡೆದಿದೆ.
ಬಂಡಿಗುಡ್ಡ ಗ್ರಾಮದ ಕುಮಾರ್ (53) ಮೃತಪಟ್ಟಿದ್ದು, ಇವರು ವಿಐಎಸ್ ಎಲ್ ನಲ್ಲಿ ಕಾವಲುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದರು.
ಬದ್ನೆಹಾಳ್ ಮತ್ತು ಬಂಡಿಗುಡ್ಡದ ಬಳಿ ಇರುವ ವಿಐಎಸ್ ಎಲ್ ಗೆ ಸಂಬಂಧಿಸಿದ ಆಸ್ತಿ ಕಾಯಲು ತೆರಳುತ್ತಿದ್ದ ಸಂದರ್ಭದಲ್ಲಿ ಒಂಟಿ ಸಲಗ ದಾಳಿ ನಡೆಸಿದೆ.