ಹೊಸದಿಗಂತ ವರದಿ ತುಮಕೂರು:
ವಿದ್ಯುತ್ ತಂತಿ ಸ್ಪರ್ಶದಿಂದ ಓರ್ವ ವ್ಯಕ್ತಿ, ಹಾಗೂ ಎರಡು ಸೀಮೆ ಹಸು ಮೃತ ಪಟ್ಟಿರುವ ಘಟನೆ ತಿಪಟೂರು ತಾಲೂಕಿನ ಕಸಬಾ ಹೋಬಳಿ ಚಿಕ್ಕಕೊಟ್ಟಿಗೇಹಳ್ಳಿ ಹಾಗೂ ಕಲ್ಲಯ್ಯನಪಾಳ್ಯದಲ್ಲಿ ನಡೆದಿದೆ.
ಕಲ್ಲಯ್ಯನಪಾಳ್ಯದ ನಿವಾಸಿ ಯೋಗೀಶ್ (50) ಮೃತ ದುರ್ದೈವಿ. ಪ್ರತಿದಿನದಂತೆ ತನ್ನ ಮನೆಯ 5 ರಾಸು ಹಸುಗಳನ್ನು ಸಮೀಪವಿರುವ ತೋಟದಲ್ಲಿ ಮೇಯಿಸಲು ಬಂದಾಗ ಮಂಗಳವಾರ ಬೆಳಗ್ಗೆ 8=30 ಈ ಗಂಟೆಯ ಸಮಯದಲ್ಲಿ ಈ ಘಟನೆ ಸಂಭವಿಸಿದೆ.
ಮೃತ ಸೀಮೆ ಹಸುಗಳು ಸುಮಾರು 70 ರಿಂದ 80 ಸಾವಿರ ರೂಪಾಯಿ ಮೌಲ್ಯವುಳ್ಳ ಆಗಿದ್ದು ಹೈನುಗಾರಿಕೆ ಹಾಗೂ ಕೃಷಿಯಿಂದ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ನಾಗರಾಜು, ನೊಣವಿನಕೆರೆ ಪಿಎಸ್ಐ ಬಸವರಾಜು, ಬೆಸ್ಕಾಂ ಎಇ ಮನೋಹರ್ ಬೇಟಿ ನೀಡಿದ್ದಾರೆ.