ಹೊಸದಿಗಂತ ವರದಿ,ಕುಶಾಲನಗರ:
ವಿದ್ಯುತ್ ಪ್ರವಹಿಸಿ ವ್ಯಕ್ತಿಯೊಬ್ಬರು ಸಾವಿಗೀಡಾದ ಘಟನೆ ಕುಶಾಲನಗರದ ಬೈಚನಹಳ್ಳಿಯಲ್ಲಿ ನಡೆದಿದೆ.
ಕುಶಾಲನಗರದ ಕಾವೇರಿ ಬಡಾವಣೆ ನಿವಾಸಿ ಬಿ.ಬಿ.ಮೋಹನ್ (66) ಮೃತ ದುರ್ದೈವಿ.
ಬೈಚನಹಳ್ಳಿಯ ರೈತ ಸಹಕಾರ ಭವನದ ಬಳಿ ತುಂಡಾಗಿ ನೆಲಕ್ಕೆ ಬಿದ್ದಿದ್ದ 11 ಕೆವಿ ವಿದ್ಯುತ್ ತಂತಿಯನ್ನು ತುಳಿದ ಪರಿಣಾಮ ಅವರು ಸಾವಿಗೀಡಾಗಿರುವುದಾಗಿ ಹೇಳಲಾಗಿದೆ.
ಮೋಹನ್ ಅವರ ಸಾವಿಗೆ ಕಾರಣವಾದ ಚೆಸ್ಕಾಂ ಕಾರ್ಯವೈಖರಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಕೆಇಬಿ ಇಂಜಿನಿಯರ್, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಮೃತರ ಕುಟುಂಬಕ್ಕೆ ಮೂರು ತಿಂಗಳೊಳಗೆ ಪರಿಹಾರ ಒದಗಿಸುವುದಾಗಿ ಇಂಜಿನಿಯರ್ ಮಂಜುನಾಥ್ ಭರವಸೆ ನೀಡಿದ್ದಾರೆ.