FOOD | ಘೀ ರೋಸ್ಟ್, ಸುಕ್ಕ ತಿಂದು ಬೇಜಾರಾಗಿದ್ಯಾ? ಹಾಗಾದ್ರೆ ಪ್ರಾನ್ಸ್ ಕಟ್ಲೆಟ್ ಟ್ರೈ ಮಾಡಿ!

ಪ್ರಾನ್ಸ್ ಕಟ್ಲೆಟ್ , ಸರಳ ಮತ್ತು ರುಚಿಕರವಾದ ಮಾಂಸಾಹಾರಿ ಪಾಕವಿಧಾನವಾಗಿದ್ದು, ಇದನ್ನು ಸಂಜೆ ಸ್ನ್ಯಾಕ್ಸ್ ಗೆ ಅಥವಾ ಸ್ಟಾರ್ಟರ್ ಆಗಿಯೂ ತಿನ್ನಬಹುದು. ಇದು ಸ್ವಲ್ಪ ಖಾರದ ರುಚಿಯನ್ನು ಹೊಂದಿರುತ್ತದೆ. ಈ ಖಾದ್ಯವನ್ನು ಮನೆಯಲ್ಲೇ ತಯಾರಿಸುವುದು ಬಹಳ ಸುಲಭ. ಇಲ್ಲಿದೆ ರೆಸಿಪಿ.

ಬೇಕಾಗುವ ಪದಾರ್ಥಗಳು

6 ಸೀಗಡಿ ಅಥವಾ ಪ್ರಾನ್ಸ್
2 ಚಮಚ ಬೆಳ್ಳುಳ್ಳಿ ಪೇಸ್ಟ್
2 ಚಮಚ ಗರಂ ಮಸಾಲೆ ಪುಡಿ
ಉಪ್ಪು ಅಗತ್ಯಕ್ಕೆ ತಕ್ಕಷ್ಟು
1 ಕಪ್ ಕಡಲೆ ಹಿಟ್ಟು
3 ಚಮಚ ಈರುಳ್ಳಿ ಪೇಸ್ಟ್
ಒಂದೂವರೆ ಚಮಚ ಕೆಂಪು ಮೆಣಸಿನ ಪುಡಿ
2 ಮೊಟ್ಟೆ
2 ಕಪ್ ಬ್ರೆಡ್ ಕ್ರಂಬ್ಸ್
ಕರಿಯಲು ಎಣ್ಣೆ

ಮಾಡುವ ವಿಧಾನ

ಒಂದು ದೊಡ್ಡ ಬಟ್ಟಲಿನಲ್ಲಿ ಗರಂ ಮಸಾಲೆ ಪುಡಿ, ಕೆಂಪು ಮೆಣಸಿನ ಪುಡಿ,ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ ಪೇಸ್ಟ್, ಉಪ್ಪು ಮತ್ತು ಮೊಟ್ಟೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸೀಗಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಮ್ಯಾರಿನೇಟ್ ಆಗಲು ಸೀಗಡಿಯನ್ನು 30 ನಿಮಿಷಗಳ ಕಾಲ ರೆಫ್ರಿಜರೇಟರ್‌ನಲ್ಲಿಡಿ.

ನಂತರ ರೆಫ್ರಿಜರೇಟರ್‌ನಲ್ಲಿ ಇರಿಸಿದ ಸೀಗಡಿಯನ್ನು ಬ್ರೆಡ್ ಕ್ರಂಬ್ಸ್ ಮಿಶ್ರಣಕ್ಕೆ ಅದ್ದಿ. ಕನಿಷ್ಠ 10 ನಿಮಿಷಗಳ ಕಾಲ ಮತ್ತೆ ರೆಫ್ರಿಜರೇಟರ್‌ನಲ್ಲಿಡಿ. ಈಗ ಒಂದು ಪ್ಯಾನ್ ನಲ್ಲಿ ಎಣ್ಣೆ ಹಾಕಿ ಮ್ಯಾರಿನೇಟ್ ಮಾಡಿದ ಸೀಗಡಿಯನ್ನು ಒಂದೊಂದಾಗಿ ಅದರಲ್ಲಿ ಹಾಕಿ. ಅವು ಎರಡೂ ಕಡೆ ತಿಳಿ ಕಂದು ಬಣ್ಣಕ್ಕೆ ತಿರುಗುವವರೆಗೆ ಡೀಪ್ ಫ್ರೈ ಮಾಡಿದರೆ ಪ್ರಾನ್ಸ್ ಕಟ್ಲೆಟ್ ರೆಡಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!