ಮರದಲ್ಲಿ ಸಿಲುಕಿದ್ದ ಹಾಸಿಗೆ ತೆಗೆಯಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ವ್ಯಕ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮರದಲ್ಲಿ ಸಿಲುಕಿದ್ದ ಹಾಸಿಗೆ ತೆಗೆಯಲು ಹೋಗಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಮಂಬೈನ ಸಾಂತಾಕ್ರೂಜ್‌ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತನನ್ನು ವಿಜಯ್​ ಗುಪ್ತಾ(35) ಎಂದು ಗುರುತಿಸಲಾಗಿದ್ದು, ಆತ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದ. ಪಕ್ಕದ ಕಟ್ಟಡದ ಮರದಲ್ಲಿ ಹಾಸಿಗೆ ಸಿಲುಕಿಕೊಂಡಿದ್ದನ್ನು ಗಮನಿಸಿದ ವಿಜಯ್​, ಹಾಸಿಗೆಯನ್ನು ತೆಗೆಯಬೇಕೆಂಬ ಉದ್ದೇಶದಿಂದ ತಮ್ಮ ಕಟ್ಟಡದ ಮೇಲೆ ಹತ್ತಿದ್ದ. ಎರಡನೇ ಮಹಡಿಯಿಂದ ಹಾಸಿಗೆಯನ್ನು ತೆಗೆಯಲು ಯತ್ನಿಸಿದ ವಿಜಯ್​ ನಿಯಂತ್ರಣ ತಪ್ಪಿ ಕಟ್ಟಡದಿಂದ ಕೆಳಗೆ ಬಿದ್ದಿದ್ದಾನೆ.

ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಪ್ರತ್ಯಕ್ಷದರ್ಶಿಯೊಬ್ಬರು ಈ ಕುರಿತು ಮಾತನಾಡಿದ್ದು, ಗಾಳಿ ಬೀಸಿದ್ದರಿಂದ ಹಾಸಿಗೆ ಮರದಲ್ಲಿ ಸಿಲುಕಿಕೊಂಡಿರಬಹುದು. ಹಾಸಿಗೆ ತೆಗೆಯುವ ಪ್ರಯತ್ನ ಬೇಡ ಎಂದು ಗುಪ್ತಾಗೆ, ಆತನ ಕುಟುಂಬಸ್ಥರು ಹೇಳಿದರೂ ಅವರ ಮಾತಿಗೆ ಬೆಲೆ ಕೊಡದೇ ಛಾವಣಿ ಏರಿದ್ದ. ಹೀಗಾಗಿ ಈ ದುರ್ಘಟನೆ ನಡೆದಿದೆ ಎಂದಿದ್ದಾರೆ.

ಈ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!