ಉಗ್ರ ಚಟುವಟಿಕೆಗೆ ಹಣ ಸಂಗ್ರಹ : ಎನ್‌ಐಎ ಬಲೆಗೆ ಬಿಹಾರದ ಐಎಸ್‌ಐಸ್ ತೀವ್ರಗಾಮಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಯೋತ್ಪಾದಕ ಸಂಘಟನೆಗಾಗಿ ಹಣ ಸಂಗ್ರಹಣೆಯಲ್ಲಿ ಭಾಗಿಯಾಗಿದ್ದ ಇಸ್ಲಾಮಿಕ್ ಸ್ಟೆಟ್‌ನ (ಐಎಸ್‌ಐಸ್) ತೀವ್ರಗಾಮಿ ಮತ್ತು ಸಕ್ರಿಯ ಸದಸ್ಯನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ

ಆರೋಪಿಯನ್ನು ದಿಲ್ಲಿಯ ಬಟ್ಲಾ ಹೌಸ್ ನಿವಾಸಿ ಮೊಹ್ಸಿನ್ ಅಹ್ಮದ್ ಎಂದು ಗುರುತಿಸಲಾಗಿದೆ. ಸದ್ಯ ಬಟ್ಲಾ ಹೌಸ್‌ನಲ್ಲಿರುವ ಜೋಗಾಬಾಯಿ ಎಕ್ಸ್‌ಟೆನ್ಶನ್ ಬಳಿ ವಾಸಿಸುತ್ತಿದ್ದ ಆರೋಪಿ ಮೊಹ್ಸಿನ್ ಅಹ್ಮದ್‌ನ ನಿವಾಸದಲ್ಲಿ ಎನ್‌ಐಎ ಶನಿವಾರ ಕಾರ್ಯಾಚರಣೆ ಕೈಗೊಂಡಿತ್ತು. ಅಹ್ಮದ್ ಬಿಹಾರದ ಪಟನಾದ ಖಾಯಂ ನಿವಾಸಿಯಾಗಿದ್ದು, ಭಯೋತ್ಪಾದಕ ಸಂಘಟನೆಗಾಗಿ ಹಣ ಸಂಗ್ರಹಣಾ ಚಟುವಟಿಕೆಯಲ್ಲಿ ಭಾಗಿಯಾಗಿದ್ದರ ಹಿನ್ನೆಲೆ ಈತನನ್ನು ಬಂಧಿಸಲಾಗಿದೆ ಎಂದು ಎನ್‌ಐಎ ತಿಳಿಸಿದೆ.

ಕಳೆದ ಜೂನ್.25ರಂದು ಎನ್‌ಐಎ ಸ್ವಯಂ ಪ್ರೇರಿತವಾಗಿ ಅಹ್ಮದ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು. ಭಾರತ ಮತ್ತು ವಿದೇಶಗಳಲ್ಲಿ ಐಸಿಸ್ ಬಗ್ಗೆ ಸಹಾನುಭೂತಿ ಹೊಂದಿರುವವರಿಂದ ನಿಧಿ ಸಂಗ್ರಹದಲ್ಲಿ ಬಾಗಿಯಾಗಿದ್ದ. ಉಗ್ರ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಈ ಹಣವನ್ನು ತರ ಸ್ಥಳಗಳಿಗೆ ಕ್ರಪ್ಟೋಕರೆನ್ಸಿ ರೂಪದಲ್ಲಿ ಕಳುಹಿಸುತ್ತಿದ್ದರು ಎಂದು ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!