VIRAL VIDEO| ಪತ್ನಿ ಜೊತೆ ವಿಚ್ಛೇದನದ ಖುಷಿಯಲ್ಲಿ ಮಾರಣಾಂತಿಕ ಸಾಹಸಕ್ಕೆ ಕೈ ಹಾಕಿದ ಯುವಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯುವಕನೊಬ್ಬ ತನ್ನ ಪತ್ನಿಯಿಂದ ವಿಚ್ಛೇದನ ಪಡೆದ ಖುಷಿಯಲ್ಲಿ ಮಾರಣಾಂತಿಕ ಸಾಹಸಕ್ಕೆ ಕೈ ಹಾಕಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾನೆ.  ಅವನು ಒಂದು ಯೋಚಿಸಿದರೆ, ವಿಧಿ ಇನ್ನೊಂದು ಯೋಚಿಸಿತ್ತು. ಆತ ಮಾಡಿದ ದುಸ್ಸಾಹಸ ಆತನಿಗೇ ಮುಳುವಾಯಿತು.

ಯುವಕನ ಹೆಸರು ರಾಫೆಲ್ ಡಾಸ್ ಸ್ಯಾಂಟೋಸ್ ಟೋಸ್ಟಾ. ವಯಸ್ಸು 22 ವರ್ಷ ಮದುವೆಯೂ ಆಗಿದೆ ಆದರೆ, ಕೆಲ ವರ್ಷಗಳ ಬಳಿಕ ಪತ್ನಿಯೊಂದಿಗೆ ಜಗಳ ಆರಂಭಿಸಿದ. ಅಷ್ಟೆ, ವಿಷಯ ವಿಚ್ಛೇದನದವರೆಗೆ ಹೋಯಿತು. ನ್ಯಾಯಾಲಯದ ಮೊರೆ ಹೋದಾಗ ಇಬ್ಬರಿಗೂ ವಿಚ್ಛೇದನ ನೀಡಲಾಯಿತು. ಇದರಿಂದ ರಫೇಲ್‌ಗೆ ಅತೀವ ಆನಂದವಾಗಿ ಈ ಸಂದರ್ಭವನ್ನು ವಿನೂತನವಾಗಿ ಆಚರಿಸಲು ನಿರ್ಧರಿಸಿ ಬಂಗೀ ಜಂಪ್ ಆಯ್ಕೆ ಮಾಡಿಕೊಂಡರು.

70 ಅಡಿ ಎತ್ತರದಿಂದ ಬಂಗೀ ಜಂಪ್‌ ಮಾಡುವಾಗ ಹಗ್ಗ ಮಧ್ಯದಲ್ಲಿ ತುಂಡಾಗಿ ಭೀಕರ ಅಪಘಾತ ಸಂಭವಿಸಿದೆ. ರಾಫೆಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಆತನ ಕುತ್ತಿಗೆ, ಕೈ ಕಾಲುಗಳು ಮುರಿದಿವೆ. ಆದರೆ, ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ರಾಫೆಲ್ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!