ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಲ್ಲಿ ಡ್ಯಾನ್ಸ್ ಎಂದಾಕ್ಷಣ ನೋರಾ ಫತೇಹಿಯಂತವರು ನೆನಪಿಗೆ ಬರುತ್ತಾರೆ. ಕೆನಡಾದ ನೃತ್ಯಗಾರ್ತಿ ನೋರಾ ಫತೇಹಿ ಬೆಲ್ಲಿ ಡ್ಯಾನ್ಸ್‌ಗೆ ಬೋಲ್ಡ್ ಆಗದವರೇ ಇಲ್ಲ. ಹುಡುಗಿಯರು ಬೆಲ್ಲಿ ನೃತ್ಯ ಮಾಡೋದು ಸಾಮಾನ್ಯ, ಆದರೆ ಒಬ್ಬ ಹುಡುಗ ಹೆಣ್ಮಕ್ಕಳನ್ನು ನಾಚಿಸುವಂತೆ ಹೆಜ್ಜೆ ಹಾಕಿ ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದಾನೆ.
ಯುವಕನ ಬೆಲ್ಲಿ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾರ್ಟಿಯೊಂದರಲ್ಲಿ ಯುವಕ ಬೆಲ್ಲಿ ಡ್ಯಾನ್ಸ್ ಮಾಡಿ ಅಲ್ಲಿದ್ದವರನ್ನು ಪುಳಕಿತಗೊಳಿಸಿದ್ದಾನೆ. ಯುವಕ ಬೆಲ್ಲಿ ಡ್ಯಾನ್ಸ್ ಮಾಡುತ್ತಿದ್ದರೆ, ಪಾರ್ಟಿಯಲ್ಲಿದ್ದವರೆಲ್ಲ ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟಿದರು. 42 ಸೆಕೆಂಡ್ ನ ಈ ವಿಡಿಯೋದಲ್ಲಿ ಡ್ಯಾನ್ಸ್ ಮಾಡಿರುವ ಈ ಯುವಕನ ಗುರುತು ಹೊರ ಬಂದಿಲ್ಲ. ಹುಡುಗಿಯರು ಬೆಲ್ಲಿ ಡ್ಯಾನ್ಸ್ ಮಾಡಬೇಕೆಂದರೆ ಈ ಯುವಕನ ಬಳಿ ಬಂದು ಕಲಿಯಲಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
Nora Fatehi who? pic.twitter.com/8uH7VPQ78H
— desi mojito 🇮🇳 (@desimojito) October 16, 2023