ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದ ಜೈಪುರದ ರಸ್ತೆಯಲ್ಲಿ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಈ ಘಟನೆಯನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಬೃಹತ್ ಪ್ರತಿಭಟನೆ ಮಾಡಿವೆ.
ರಾಜ್ಯ ಸರ್ಕಾರ ಇದಕ್ಕೆ ಉತ್ತರ ನೀಡಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದ್ದಾರೆ. ಹಿಂದೂ ಗುಂಪುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಜೈಪುರದಲ್ಲಿ ಕೋಮು ಉದ್ವಿಗ್ನತೆಯಾಗಿತ್ತು. ರಸ್ತೆಯಲ್ಲಿ ಜಗಳ ಆಡಿದ ನಂತರ 17 ವರ್ಷದ ಯುವಕನನ್ನು ಕೊಲ್ಲಲಾಗಿದೆ ಎಂದು ಪ್ರತಿಭಟನಾನಿರತರು ಹೇಳಿದ್ದಾರೆ.
ಹಿನ್ನೆಲೆ ಏನು?
ರಸ್ತೆಯಲ್ಲಿ ಎರಡು ಬೈಕ್ ಡಿಕ್ಕಿಯಾಗಿತ್ತು. ಅದನ್ನು ನೋಡಲು ಜನ ಜಮಾಯಿಸಿದ್ದರು. ಜಗಳವಾಡದಂತೆ ತಡೆದು ಇಬ್ಬರನ್ನೂ ಕಳಿಸಿದ್ದಾರೆ. ಆದರೆ ಗುಂಪಿನಲ್ಲಿದ್ದ ಯುವಕ ಹಾಗೂ ಸ್ಥಳೀಯನ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದೇ ಹೆಚ್ಚಾಗಿ ಯುವಕ ಇಕ್ಬಾಲ್ ಮೇಲೆ ಜನರು ಹಲ್ಲೆ ಮಾಡಿದ್ದಾರೆ. ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇತ್ತ ಇಕ್ಬಾಲ್ ಪೋಷಕರು ಮಗನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಆರೋಪಿಸಿದ್ದಾರೆ.