ಮನುಷ್ಯ ಸತ್ಯದ ಅರಿವು ಪಡೆದುಕೊಂಡು ಜ್ಞಾನ ಸಂಪಾದನೆಯೆಡೆಗೆ ಸಾಗಬೇಕು: ಚಿದ್ರೂಪಾನಂದ ಸರಸ್ವತಿ ಸ್ವಾಮೀಜಿ

ಹೊಸದಿಗಂತ ವರದಿ,ಅರಸೀಕೆರೆ :

ಮನುಷ್ಯ ಸತ್ಯದ ಅರಿವು ಪಡೆದುಕೊಂಡು ಸತ್ಯ ನ್ಯಾಯ ನೀತಿಯನ್ನು ಅನುಸರಿಸುವ ಮೂಲಕ ಜ್ಞಾನ ಸಂಪಾದನೆಯೆಡೆಗೆ ಸಾಗಬೇಕು ಎಂದು ಹುಬ್ಬಳ್ಳಿ ಆರ್ಷ ವಿದ್ಯಾ ಪೀಠದ ಚಿದ್ರೂಪಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು.

ಕರ್ನಾಟಕದ ತಿರುಪತಿ ಎಂದೇ ಖ್ಯಾತಿ ಪಡೆದಿರುವ ನಗರ ಹೊರವಲಯದ ಅಮರಗಿರಿ ಮಾಲೇಕಲ್ ತಿರುಪತಿ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯದ ಆವರಣಕ್ಕೆ ಹೊಂದಿಕೊಂಡಂತಿರುವ ನೀರಿನ ಕಲ್ಯಾಣಿಯಲ್ಲಿ ನಗರದ ಮಂಜುಳ ವೈದ್ಯ ಸಿ. ವಿ. ಶ್ರೀಧರಮೂರ್ತಿ ದಂಪತಿಗಳು ನಿರ್ಮಿಸಿರುವ ಲಕ್ಷ್ಮೀ ವೆಂಕಟರಮಣ ಸ್ವಾಮಿಯ ಜಲಕ್ರೀಡಾ ಮಂಟಪ ಹಾಗೂ ಶ್ರೀನಿವಾಸ ಕಲ್ಯಾಣ ಮಹೋತ್ಸವದ ಶಿಲ್ಪಕಲಾ ಪ್ರತಿಮೆಗಳ ಗ್ಯಾಲರಿಯ ಪ್ರಾರಂಭೋತ್ಸವ ನಿಮಿತ್ತ ನ. 9 ಮತ್ತು 10 ರಂದು ಹಮ್ಮಿಕೊಳ್ಳಲಾಗಿದ್ದ, ಪೌರಾಣಿಕ ಪ್ರದರ್ಶನ ಸಂಪ್ರೋಕ್ಷಣ ಮಹೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು.

ಧಾರ್ಮಿಕ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ನೀಡಿ ಮಾತನಾಡಿದ ಅವರು, ಒಬ್ಬ ವಿಜ್ಞಾನಿ ಕಪ್ಪೆಯ ದೇಹವನ್ನು ಸೀಳಿ ಅದರ ಅಂಗಾಂಗಗಳನ್ನು ಪ್ರಯೋಗಕ್ಕೆ ಒಳಪಡಿಸಿ ಜ್ಞಾನ ಸಂಪಾದಿಸುವುದಲ್ಲದೇ ಜಗತ್ತಿಗೆ ಸತ್ಯದ ಅರಿವು ಮೂಡಿಸುತ್ತಾರೆ, ಅದೇ ರೀತಿ ಮನುಷ್ಯ ಕೂಡ ಸತ್ಯದ ಅರಿವು ಪಡೆದುಕೊಂಡು ಸತ್ಯ ನ್ಯಾಯ ನೀತಿಯನ್ನು ಅನುಸರಿಸುವ ಮೂಲಕ ಜ್ಞಾನ ಸಂಪಾದನೆಯೆಡೆಗೆ ಸಾಗಬೇಕು ಆಶೀರ್ವಚನ ನೀಡಿದರು.

ನ. 9 ರಂದು ಸಂಜೆ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವರನ್ನು ಕಲ್ಯಾಣಿಯ ಹೊರಗಿನ ಮಂಟಪದಲ್ಲಿ ಬಿಜಂಗೈಯ ಪೂಜಾ ಕಾರ್ಯ ಪೂರ್ಣಗೊಂಡ ನಂತರ ದೇವತಾ ಪ್ರಾರ್ಥನೆ, ಪೂರ್ಣಾಹುತಿ, ಅಷ್ಟಾವಧಾನ ಸೇವೆ, ಮಹಾನಿವೇದನಾ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.

ನ. 10 ರಂದು ಬೆಳಿಗ್ಗೆ ಸ್ವಸ್ತಿ ವಾಚನ, ಅಂಕುರಾರ್ಪಣೆ, ಆರಾಧನೆ, ಕಲಶಾರಾಧನೆ, ಅಗ್ನಪ್ರಣಯನ, ನಿತ್ಯಹೋಮ, ಮಹಾಶಾಂತಿ ಹೋಮ, ಕದಳಿ, ಕೂಷ್ಮಾಂಡ ಛೇದನ, ನಿರೀಕ್ಷಣೆ, ಗೋಬ್ರಹ್ಮಣಧೀಪದಾನ್ಯ ದರ್ಶನ, ಬಳಿಕ ಲಕ್ಷ್ಮೀ ವೆಂಕಟರಮಣ ಸ್ವಾಮಿಯವರ ಜಲಕ್ರೀಡೋತ್ಸವದೊಂದಿಗೆ ನೂತನ ಆಸ್ಥಾನ ಮಂಟಪದಲ್ಲಿ ಬಿಜಮಾಡಿಸಿ ಅಷ್ಟಾವಧಾನ ಸೇವೆ, ಮಹಾನಿವೇದನಾ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.

ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಲಕ್ಷ್ಮೀ ವೆಂಕಟರಮಣ ಸ್ವಾಮಿ ಹಾಗೂ ಗೋವಿಂದರಾಜ ಸ್ವಾಮಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಶ್ರೀನಿವಾಸ ಕಲ್ಯಾಣ ಮಹೋತ್ಸವ ಹಾಗೂ ನೀರಿನ ಕಲ್ಯಾಣಿಯಲ್ಲಿ ನಡೆದ ತೆಪ್ಪೋತ್ಸವ ದೇವರ ಜಲಕ್ರೀಡೆ, ಶ್ರೀನಿವಾಸ ಕಲ್ಯಾಣ ಮಹೋತ್ಸವದ ಶಿಲ್ಪಕಲಾ ಪ್ರತಿಮೆಗಳ ಮನಮೋಹಕ ಗ್ಯಾಲರಿಯ ಸಂಪ್ರೋಕ್ಷಣ ಮಹೋತ್ಸವವನ್ನು ಕಣ್ತುಂಬಿಕೊಂಡರು. ಶ್ರೀನಿವಾಸ ಕಲ್ಯಾಣೋತ್ಸವ ಶಿಲ್ಪಕಲಾ ಪ್ರತಿಮೆಗಳ ನಿರ್ಮಾತೃ ವೈದ್ಯ ಸಿ. ವಿ. ಶ್ರೀಧರ ಮೂರ್ತಿ ದಂಪತಿಯನ್ನು ಸನ್ಮಾನಿಸಲಾಯಿತು

ಉದ್ಯಮಿ ಹಾಗೂ ತಾಲ್ಲೂಕು ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಅರುಣ್ ಕುಮಾರ್, ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರುಣ್ ಕುಮಾರ್, ನಗರಸಭೆ ಮಾಜಿ ಉಪಾಧ್ಯಕ್ಷ ಪಾರ್ಥಸಾರಥಿ, ವೆಂಕಟಪುರಿ ಪುಸ್ತಕದ ಬರಹಗಾರ ಕೆ. ಎಸ್. ಹರಶಿವಮೂರ್ತಿ, ನಾಗರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!