ಹೊಸದಿಗಂತ ವರದಿ ಅಂಕೋಲಾ:
ಪಿತ್ರಾರ್ಜಿತ ಆಸ್ತಿಯ ವಿಷಯದಲ್ಲಿ ಹಿಂದಿನಿಂದಲೂ ನಡೆಯುತ್ತ ಬಂದಿರುವ ಜಗಳ ತಾರಕಕ್ಕೇರಿ ವ್ಯಕ್ತಿಯೋರ್ವರಿಗೆ ಒಡೆದ ಗಾಜಿನ ಬಾಟಲಿಯಿಂದ ಇರಿದ ಘಟನೆ ತಾಲೂಕಿನ ಹಟ್ಟಿಕೇರಿಯಲ್ಲಿ ನಡೆದಿದ್ದು, ಇರಿತದಿಂದ ಗಾಯಗೊಂಡ ವ್ಯಕ್ತಿಯನ್ನು ಕಾರವಾರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಟ್ಟಿಕೇರಿ ನಿವಾಸಿ ವಿಷ್ಣು ತಾಕು ನಾಯ್ಕ(60)ಗಾಯಗೊಂಡ ವ್ಯಕ್ತಿ.
ವಿಷ್ಣು ತಾಕು ನಾಯ್ಕನ ತಮ್ಮನ ಮಗ ರಾಜು ಜಯಂತ ನಾಯ್ಕ(30) ಎಂಬಾತ ತನ್ನ ದೊಡ್ಡಪ್ಪ ವಿಷ್ಣು ಕಟ್ಟಿಗೆ ಒಡೆಯುತ್ತಿರುವ ಸಂದರ್ಭದಲ್ಲಿ ಬಂದು ಜಾಗ ಖಾಲಿ ಮಾಡಿ ಹೋಗುವಂತೆ ಸಾಕಷ್ಟು ಬಾರಿ ತಿಳಿಸಿದರೂ ಜಾಗ ಬಿಟ್ಟು ಹೋಗುತ್ತಿಲ್ಲ ನಿಮಗೆ ಬಾಯಿಂದ ಹೇಳಿದರೆ ಪ್ರಯೋಜನವಿಲ್ಲ ಸಾಯಿಸಿದರೆ ಸರಿಯಾಗುತ್ತದೆ ಎಂದು ಅವಾಚ್ಯ ಶಬ್ದಗಳಿಂದ ಬಯ್ದು ಅಲ್ಲಿ ಬಿದ್ದಿರುವ ಗಾಜಿನ ಬಾಟಲಿಯನ್ನು ಒಡೆದು ವಿಷ್ಣು ಅವರ ಎದೆಯ ಭಾಗ ಮತ್ತು ಬೆನ್ನಿಗೆ ಚುಚ್ಚಿ ಗಾಯಗೊಳಿಸಿದ್ದು, ಜಾಗ ಖಾಲಿ ಮಾಡದಿದ್ಧರೆ ಜೀವ ತೆಗೆಯುವ ಬೆದರಿಕೆ ಹಾಕಿರುವುದಾಗಿ ಗಾಯಾಳುವಿನ ಮಗ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.



