ಬ್ಯಾಟರಿಗೆ ಬೇಕಾದ ಲಿಥಿಯಂ ನಿರ್ವಹಣೆ, ಜಿಂಬಾಬ್ವೆ ಬುದ್ಧಿವಂತ ನಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬ್ಯಾಟರಿಗೆ ಬೇಕಾದ ಲಿಥಿಯಂ ನಿರ್ವಹಣೆಯಲ್ಲಿ ಜಿಂಬಾಬ್ವೆ ಬುದ್ಧಿವಂತ ನಡೆ ತೋರಿದ್ದು, ತನ್ನ ಗಣಿಗಳಿಂದ ಕಚ್ಚಾ ಲಿಥಿಯಂ ರಫ್ತು ಮಾಡುವುದನ್ನು ನಿಷೇಧಿಸಿದೆ.
ಇದರಿಂದಾಗಿ ವಿದೇಶಿ ಕಂಪನಿಗಳಿಗೆ ರಫ್ತು ಮಾಡಲು ಬೇಕಾದ ಬಿಲಿಯನ್ ಡಾಲರ್‌ಗಳನ್ನು ಜಿಂಬಾಬ್ವೆ ಉಳಿಸಿಕೊಂಡಿದೆ.

ದಕ್ಷಿಣ ಆಫ್ರಿಕಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ಗಳಿಗೆ ಕಳ್ಳಸಾಗಣೆಯಿಂದಾಗಿ $1.8 ಬಿಲಿಯನ್ ನಷ್ಟವಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಎಲ್ಲ ವಸ್ತುಗಳಿಗಿಂತ ಹೆಚ್ಚು ಕಳ್ಳಸಾಗಣೆಯಾದ ಖನಿಜ ಚಿನ್ನ. ಅದಾಗ್ಯೂ ಚಿನ್ನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಬೇಡಿಕೆ ಇದೆ.
ಇದೇ ದಾರಿಯಲ್ಲಿ ನಡೆದರೆ ಜಿಂಬಾಬ್ವೆ ವಿಶ್ವದ ಅತಿದೊಡ್ಡ ಲಿಥಿಯಂ ರಫ್ತುದಾರರಲ್ಲಿ ಒಂದಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಲಿಥಿಯಂ ಸಂಪನ್ಮೂಲಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಮೂಲಕ ವಿಶ್ವದ ಲಿಥಿಯಂ ಬೇಡಿಕೆಯಲ್ಲಿ ಶೇ.20ರಷ್ಟನ್ನು ಪೂರೈಕೆ ಮಾಡಲು ಸರ್ಕಾರ ನಿರೀಕ್ಷಿಸಿದೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ 2021ರ ಗಣಿಗಾರಿಕೆ ವರದಿ ಪ್ರಕಾರ, ಖನಿಜ ರಫ್ತುಗಳು ಜಿಂಬಾಬ್ವೆಯ ರಫ್ತುಗಳಿಕೆಯ ಸುಮಾರು ಶೇ.60ರಷ್ಟಿದೆ. ಆದರೆ ಗಣಿಗಾರಿಕೆ ವಲಯವು ಜಿಡಿಪಿಗೆ ಶೇ. 16ರಷ್ಟು ಕೊಡುಗೆ ಮಾತ್ರ ನೀಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!